Home ಟಾಪ್ ಸುದ್ದಿಗಳು ಗುಜರಾತ್ | ಫೂಟ್ ಪಾತ್ ನಲ್ಲಿ ಮಲಗಿದ್ದ ಕಾರ್ಮಿಕರ ಮೇಲೆ ಟ್ರಕ್ ಹರಿದು 15 ಸಾವು

ಗುಜರಾತ್ | ಫೂಟ್ ಪಾತ್ ನಲ್ಲಿ ಮಲಗಿದ್ದ ಕಾರ್ಮಿಕರ ಮೇಲೆ ಟ್ರಕ್ ಹರಿದು 15 ಸಾವು

ಸೂರತ್ : ಗುಜರಾತ್ ನ ಸೂರತ್ ನ ಕಿಮ್ ಚಾರ್ ರಸ್ತೆಯ ಫೂಟ್ ಪಾತ್ ನಲ್ಲಿ ಮಲಗಿದ್ದ 18 ಮಂದಿ ವಲಸಿಗ ಕಾರ್ಮಿಕರ ಮೇಲೆ ಟ್ರಕ್ ಒಂದು ಹರಿದು, 15 ಮಂದಿ ಸಾವಿಗೀಡಾದ ಆಘಾತಕಾರಿ ಘಟನೆ ವರದಿಯಾಗಿದೆ.

ರಾಜಸ್ಥಾನದ ಬನ್ಸ್ವಾರ ಜಿಲ್ಲೆಯ ದಿನಗೂಲಿ ನೌಕರರು ಫೂಟ್ ಪಾತ್ ನಲ್ಲಿ ಮಲಗಿದ್ದರು. ಮಂಗಳವಾರ ನಸುಕಿನ ಜಾವದಲ್ಲಿ ಅವರ ಮೇಲೆ ಕಬ್ಬು ತುಂಬಿದ ಟ್ರಕ್ ಒಂದು ಅವರ ಮೇಲೆ ಹರಿದಿದೆ. ಟ್ರಕ್ ಚಾಲಕ ನಿಯಂತ್ರಣ ಕಳೆದುಕೊಂಡು ವಾಹನವನ್ನು ಫೂಟ್ ಪಾತ್ ಮೇಲೆ ಹತ್ತಿಸಿದ್ದ.

12 ಜನ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮೂವರು ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಇನ್ನು ಮೂವರು ಗಾತಗೊಂಡಿದ್ದಾರೆ. ಟ್ರಕ್ ಚಾಲಕನನ್ನು ಬಂಧಿಸಲಾಗಿದೆ. ಮೃತರಿಗೆ 2 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ.

Join Whatsapp
Exit mobile version