Home ಜಾಲತಾಣದಿಂದ ಕೆನಡಾದಲ್ಲಿ ಭೀಕರ ಅಪಘಾತ : ಕ್ಯಾಸಿನೊ ಜೂಜಿಗೆ ತೆರಳುತ್ತಿದ್ದ 15 ವೃದ್ಧರ ಸಾವು

ಕೆನಡಾದಲ್ಲಿ ಭೀಕರ ಅಪಘಾತ : ಕ್ಯಾಸಿನೊ ಜೂಜಿಗೆ ತೆರಳುತ್ತಿದ್ದ 15 ವೃದ್ಧರ ಸಾವು

ಕೆನಡಾ: ಇಲ್ಲಿನ ಪ್ರೈರೀ ಪ್ರಾಂತ್ಯದ ಮ್ಯಾನಿಟೋಬಾದಲ್ಲಿ ಕ್ಯಾಸಿನೊಗೆ ತೆರಳುತ್ತಿದ್ದ ಹಿರಿಯ ನಾಗರಿಕರ ಮೇಲೆ ಟ್ರಕ್ ಹರಿದು, ಭಾರೀ ಅನಾಹುತ ಸಂಭವಿಸಿದೆ. ಕನಿಷ್ಠ 15 ಮಂದಿ ವೃದ್ಧರು ಸಾವನ್ನಪ್ಪಿದ್ದಾರೆ.

ಗುರುವಾರ ಅವರು ಪ್ರಯಾಣಿಸುತ್ತಿದ್ದ ವಾಹನಕ್ಕೆ ಸೆಮಿ ಟ್ರೈಲರ್ ಟ್ರಕ್ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.

ಕೆನಡಾದಲ್ಲಿ ಟ್ರಕ್ ವಾಹನಕ್ಕೆ ಡಿಕ್ಕಿ ಹೊಡೆದ ನಂತರ ಕನಿಷ್ಠ 15 ವೃದ್ಧರು ಸಾವನ್ನಪ್ಪಿದ್ದಾರೆ, ವಿನ್ನಿಪೆಗ್‌ನ ಪಶ್ಚಿಮಕ್ಕೆ 170 ಕಿಮೀ (105 ಮೈಲುಗಳು) ನೈಋತ್ಯ ಮ್ಯಾನಿಟೋಬಾದ ಕಾರ್ಬೆರಿ ಪಟ್ಟಣದ ಬಳಿ ಅಪಘಾತ ಸಂಭವಿಸಿದೆ.

ಸಾವಿನ ಸಂಖ್ಯೆ ದೃಢಪಟ್ಟರೆ, ಇತ್ತೀಚಿನ ಕೆನಡಾದ ಇತಿಹಾಸದಲ್ಲಿ ಅಪಘಾತವು ಅತ್ಯಂತ ಭೀಕರ ರಸ್ತೆ ಅಪಘಾತಗಳಲ್ಲಿ ಒಂದಾಗಲಿದೆ.

Join Whatsapp
Exit mobile version