Home ಟಾಪ್ ಸುದ್ದಿಗಳು ಸರಕಾರಿ ಕಚೇರಿಗಳನ್ನು ಗೋ ಮೂತ್ರದಿಂದ ಸ್ವಚ್ಛಗೊಳಿಸಿ : ಮ.ಪ್ರ ಸರಕಾರದ ಆದೇಶ

ಸರಕಾರಿ ಕಚೇರಿಗಳನ್ನು ಗೋ ಮೂತ್ರದಿಂದ ಸ್ವಚ್ಛಗೊಳಿಸಿ : ಮ.ಪ್ರ ಸರಕಾರದ ಆದೇಶ

ಭೋಪಾಲ್: ಗೋಮೂತ್ರ ಮಿಶ್ರಿತ ಫ್ಲೋರ್ ಕ್ಲೀನರ್ ಮೂಲಕವೇ ಸರಕಾರಿ ಕಚೇರಿಗಳನ್ನು ಸ್ವಚ್ಛಗೊಳಿಸಬೇಕು ಎಂದು ಮಧ್ಯಪ್ರದೇಶ ಸರಕಾರ ಆದೇಶಿಸಿದೆ. ರಾಸಾಯನಿಕ ಕ್ಲೀನರ್‌ಗಳ ಬದಲಿಗೆ ಗೋಮೂತ್ರ ಕ್ಲೀನರ್‌ಗಳನ್ನು ಬಳಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕಳೆದ ನವೆಂಬರ್‌ನಲ್ಲಿ ಸಭೆ ಸೇರಿದ ಮೊದಲ ಗೋ ಕ್ಯಾಬಿನೆಟ್ ಈ ನಿರ್ಧಾರ ಕೈಗೊಂಡಿತ್ತು. ನಂತರ ಇದೀಗ ಮಧ್ಯಪ್ರದೇಶ ಸರಕಾರವೂ ವಿವಿಧ ಇಲಾಖೆಗಳಿಗೆ ಈ ಆದೇಶವನ್ನು ಕಳುಹಿಸಿದೆ. ಈ ಹೊಸ ನಿರ್ಧಾರ ಗೋವಿನ ರಕ್ಷಣೆಗೆ ಬಹಳ ಸಹಾಯಕವಾಗಲಿದೆ ಎಂದು ಪಶುಸಂಗೋಪನಾ ಸಚಿವ ಪ್ರೇಮ್ ಸಿಂಗ್ ಪಟೇಲ್ ಹೇಳಿದ್ದಾರೆ. “ಉತ್ಪಾದನೆಗೆ ಮುಂಚೆಯೇ ಬೇಡಿಕೆ ಹೆಚ್ಚಾಗಿದೆ. ಜನರು ಇನ್ನು ಮುಂದೆ ಬಂಜರು ಹಸುಗಳನ್ನು ತ್ಯಜಿಸುವುದಿಲ್ಲ. ಇದು ಮಧ್ಯಪ್ರದೇಶದ ಗೋವುಗಳ ಸ್ಥಿತಿಯನ್ನು ಸುಧಾರಿಸಲಿದೆ ”ಎಂದು ಅವರು ಹೇಳಿದ್ದಾರೆ.

ಆದರೆ ಸರಕಾರದ ನಿರ್ಧಾರವನ್ನು ಕಾಂಗ್ರೆಸ್ ವಿರೋಧಿಸಿದೆ. ಯಾವುದೇ ಮೂಲಸೌಕರ್ಯಗಳನ್ನು ಸರಿಪಡಿಸದೆ ಸರಕಾರ ಇಂತಹ ನಿರ್ಧಾರ ತೆಗೆದುಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಶಾಸಕ ಕುನಾಲ್ ಚೌಧರಿ ಆರೋಪಿಸಿದ್ದಾರೆ. ಉತ್ತರಾಖಂಡದ ಖಾಸಗಿ ಕಂಪನಿಗಳಿಗೆ ಸಹಾಯ ಮಾಡಲು ಸರಕಾರ ನಿರ್ಧರಿಸಿದೆ ಎಂದು ಅವರು ಆರೋಪಿಸಿದ್ದಾರೆ.

Join Whatsapp
Exit mobile version