Home ಟಾಪ್ ಸುದ್ದಿಗಳು 116 ಮಕ್ಕಳಿಗೆ ಡಾ. ಶ್ರೀ ಶಿವಕುಮಾರ ಸ್ವಾಮಿಗಳ ಹೆಸರಿಡುವ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

116 ಮಕ್ಕಳಿಗೆ ಡಾ. ಶ್ರೀ ಶಿವಕುಮಾರ ಸ್ವಾಮಿಗಳ ಹೆಸರಿಡುವ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

ಬೆಂಗಳೂರು; ನಡೆದಾಡುವ ದೇವರು ಡಾ. ಶ್ರೀ ಶಿವಕುಮಾರ ಸ್ವಾಮಿಗಳವರ ಸ್ಮರಣಾರ್ಥ ಏಪ್ರಿಲ್ 1 ರಂದು, 116ನೇ ಹುಟ್ಟುಹಬ್ಬ ಆಚರಿಸುತ್ತಿದ್ದು, ಅಂದು 116 ಮಕ್ಕಳಿಗೆ ಡಾ. ಶ್ರೀ ಶಿವಕುಮಾರ ಸ್ವಾಮಿಗಳ ಹೆಸರನ್ನು ಇಡುವ “ನಾಮಕರಣ ಮಹೋತ್ಸವ” ಕಾರ್ಯಕ್ರಮವನ್ನು ಶ್ರೀ. ಸಿದ್ದಗಂಗಾ ಮಠದಲ್ಲಿ ಆಯೋಜಿಸಲಾಗುತ್ತಿದೆ ಎಂದು ಶ್ರೀ. ಶಿವಕುಮಾರ ಮಹಾಸ್ವಾಮಿ ಅನ್ನದಾನ ಸೇವಾ ಟ್ರಸ್ಟ್ ಕಾರ್ಯಾಧ್ಯಕ್ಷ ಜಯಣ್ಣ ತಿಳಿಸಿದ್ದಾರೆ.


ನಾಮಕರಣ ಹೊಂದುವ ಮಗುವಿಗೆ ತೊಟ್ಟಿಲು, ಹೊಸ ಉಡುಪು, ಹೊಸ ಹಾಸಿಗೆ ನೀಡಲಾಗುವುದು. 1 ವರ್ಷ ದೊಳಗಿನ ಮಕ್ಕಳಿಗೆ ಪ್ರವೇಶ ಅವಕಾಶವಿದೆ. ಈ ಮಕ್ಕಳ ಪೋಷಕರು ವಿಳಾಸದ ಪುರಾವೆ ಮತ್ತು ಭಾವಚಿತ್ರ, ಮಗುವಿನ ಜನ್ಮ ದಿನದ ಪ್ರಮಾಣ ಪತ್ರದೊಂದಿಗೆ ಅರ್ಜಿ ಸಲ್ಲಿಸಬೇಕು. ಈಗಾಗಲೇ ನಾಮಕರಣ ಮಾಡಿರುವ ಮಕ್ಕಳಿಗೆ ಮರು ನಾಮಕರಣಕ್ಕೆ ಅವಕಾಶವಿಲ್ಲ. ಮಗುವಿನ ವೈದ್ಯಕೀಯ ಪಾಲನಾ ವಿವರ ಒದಗಿಸಬೇಕು ಮಾಚ್ 28 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಆಸಕ್ತರು ಮೊ:89513 05174 ಸಂಪರ್ಕಿಸಲು ಕೋರಲಾಗಿದೆ.

Join Whatsapp
Exit mobile version