Home ಟಾಪ್ ಸುದ್ದಿಗಳು ಲ್ಯಾಂಡಿಂಗ್ ವೇಳೆ ಲಘು ವಿಮಾನ ಪತನ: 10 ಮಂದಿ ಮೃತ್ಯು

ಲ್ಯಾಂಡಿಂಗ್ ವೇಳೆ ಲಘು ವಿಮಾನ ಪತನ: 10 ಮಂದಿ ಮೃತ್ಯು

ಕೌಲಾಲಂಪುರ: ಲಘು ವಿಮಾನವೊಂದು ಲ್ಯಾಂಡಿಂಗ್ ವೇಳೆ ಕಾರು ಮತ್ತು ಮೋಟರ್ ಸೈಕಲ್ ಗೆ ಡಿಕ್ಕಿ ಹೊಡೆದು ಪತನಗೊಂಡ ಘಟನೆ ಮಲೇಷ್ಯಾದ ಸೆಂಟ್ರಲ್ ಸೆಲಂಗೋರ್ ರಾಜ್ಯದಲ್ಲಿ ನಡೆದಿದೆ.


ವಿಮಾನದಲ್ಲಿದ್ದ 8 ಜನ ಹಾಗೂ ಇಬ್ಬರು ಚಾಲಕರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.


ವಿಮಾನ ಅಪಘಾತದಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು, ಒಬ್ಬರು ಮೋಟಾರ್ ಸೈಕಲ್ ಚಾಲಕ, ಇನ್ನೊಬ್ಬರು ಕಾರು ಚಾಲಕ ಮತ್ತು ವಿಮಾನದಲ್ಲಿದ್ದ 8 ಜನ ಸೇರಿದಂತೆ ಒಟ್ಟು 10 ಜನರು ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.


ಮಲೇಷ್ಯಾದ ನಾಗರಿಕ ವಿಮಾನಯಾನ ಪ್ರಾಧಿಕಾರ ನೀಡಿರುವ ಹೇಳಿಕೆಯಲ್ಲಿ, ವಿಮಾನ ಪತನಗೊಂಡ ಸಂದರ್ಭ 6 ಮಂದಿ ಪ್ರಯಾಣಿಕರು ಮತ್ತು ಇಬ್ಬರು ವಿಮಾನ ಸಿಬ್ಬಂದಿ ವಿಮಾನದಲ್ಲಿದ್ದರು ಎಂದು ತಿಳಿಸಿದೆ. ಅಲ್ಲದೇ ಘಟನೆಯ ಬಳಿಕ ಸುರಕ್ಷತಾ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದೆ.

Join Whatsapp
Exit mobile version