Home ಟಾಪ್ ಸುದ್ದಿಗಳು ಬ್ರಿಟನ್ ಸಂದರ್ಶಿಸುವ ಅನಿವಾಸಿ ಭಾರತೀಯರಿಗೆ 10 ದಿನಗಳ ಕ್ವಾರಂಟೈನ್ ಕಡ್ಡಾಯ

ಬ್ರಿಟನ್ ಸಂದರ್ಶಿಸುವ ಅನಿವಾಸಿ ಭಾರತೀಯರಿಗೆ 10 ದಿನಗಳ ಕ್ವಾರಂಟೈನ್ ಕಡ್ಡಾಯ

ನವದೆಹಲಿ: ಸೋಮವಾರದಿಂದ ಬ್ರಿಟನ್ ತಲುಪುವ ಎಲ್ಲಾ ಅನಿವಾಸಿ ಭಾರತೀಯರು ಕೋವಿಡ್ ಲಸಿಕಾ ಪ್ರಮಾಣಪತ್ರದ ಹೊರತಾಗಿಯೂ 10 ದಿನಗಳ ಕ್ವಾರಂಟೈನ್ ಕಡ್ಡಾಯವಾಗಲಿದೆ ಎಂದು ಸರ್ಕಾರದ ಮೂಲಗಳು ಇಂದು ಮಾಧ್ಯಮಕ್ಕೆ ತಿಳಿಸಿವೆ. ಬ್ರಿಟನ್ ನಿವಾಸಿಗಳಿಗೂ ಈ ನಿಯಮ ಅನ್ವಯವಾಗಲಿದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಬ್ರಿಟನ್ ಸರ್ಕಾರದ ಈ ನೂತನ ಆದೇಶದನ್ವಯ ಅಕ್ಟೋಬರ್ 4 ರಿಂದ ಬ್ರಿಟನ್ ತಲುಪುವ ಎಲ್ಲಾ ಅನಿವಾಸಿ ಭಾರತೀಯರು ಲಸಿಕಾ ಪ್ರಮಾಣಪತ್ರದ ಹೊರತಾಗಿಯೂ ಪ್ರತಿ ಯಾತ್ರಿಕರಿಗೂ ಕ್ವಾರಂಟೈನ್ ಕಡ್ಡಾಯವಾಗಲಿದೆ.

ಈ ಕುರಿತು ಪ್ರತಿಕ್ರಿಯಿಸಿದ ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ ಶೃಂಗ್ಲಾ ಅವರು ಇದೊಂದು ತಾರತಮ್ಯದ ಪರಮಾವಧಿ ಎಂದು ಬಣ್ಣಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಭಾರತ ಪ್ರವೇಶಿಸುವ ಎಲ್ಲಾ ಬ್ರಿಟನ್ ಪ್ರಜೆಗಳಿಗೆ ಕೋವಿಡ್ ಲಸಿಕಾ ಪ್ರಮಾಣಪತ್ರದ ಜೊತೆಗೆ 10 ದಿನಗಳ ಕ್ವಾರಂಟೈನ್ ಕಡ್ಡಾಯವಾಗಲಿದೆ.

Join Whatsapp
Exit mobile version