ಸೇನಾ ಕ್ಷಿಪ್ರ ಕ್ರಾಂತಿ | ರೋಹಿಂಗ್ಯಾ ಮುಸ್ಲಿಮರ ಹಿಂಸಾಚಾರ ನಡೆದಿದ್ದ ಮ್ಯಾನ್ಮಾರ್ ನಲ್ಲಿ ಒಂದು ವರ್ಷ ತುರ್ತು ಪರಿಸ್ಥಿತಿ ಘೋಷಣೆ

Prasthutha|

ಯಾಂಗೂನ್ : ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಮ್ಯಾನ್ಮಾರ್ ನಲ್ಲಿ ಸೇನಾ ಕ್ಷಿಪ್ರ ಕ್ರಾಂತಿ ನಡೆದಿದ್ದು, ಒಂದು ವರ್ಷ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

- Advertisement -

ಐದು ದಶಕಗಳ ಕಾಲ ದೇಶವನ್ನಾಳಿದ್ದ ಸೇನೆಯ ಮತ್ತು ಆಡಳಿತ ಪಕ್ಷದ ನಡುವೆ ಕೆಲವು ವಾರಗಳಿಂದ ಘರ್ಷಣೆ ನಡೆಯುತಿತ್ತು. ನವೆಂಬರ್ ನಲ್ಲಿ ನಡೆದ ಚುನಾವಣೆಯಲ್ಲಿ ಮೋಸ ನಡೆದಿದೆ ಎಂದು ಸರಕಾರದ ವಿರುದ್ಧ ಆಪಾದನೆಗಳಿದ್ದವು.

ಚುನಾವಣೆಯಲ್ಲಿ ಸೂ ಕಿ ಅವರ ನ್ಯಾಶನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷ ಗೆದ್ದಿತ್ತು. ಆದರೆ, ಈ ವೇಳೆ ಅಕ್ರಮಗಳು ನಡೆದಿವೆ ಎನ್ನಲಾದ ಹಿನ್ನೆಲೆಯಲ್ಲಿ, ಅಧಿಕಾರವನ್ನು ಸೇನೆ ವಶಪಡಿಸಿಕೊಳ್ಳುವ ಬಗ್ಗೆ ಮುನ್ಸೂಚನೆ ದೊರಕಿತ್ತು.

- Advertisement -

ಸೂ ಕಿ ಮತ್ತು ಅಧ್ಯಕ್ಷ ವಿನ್ ಮಿಂಟ್ ಸೋಮವಾರ ಬಂಧಿಸಲ್ಪಟ್ಟಿದ್ದಾರೆ. ನೊಬೆಲ್ ಪ್ರಶಸ್ತಿ ಪುರಸ್ಕೃತೆ, ಪ್ರಜಾಪ್ರಭುತ್ವ ಐಕಾನ್ ಕೆಲವು ವರ್ಷಗಳ ಹಿಂದೆ ನಡೆದ ರೋಹಿಂಗ್ಯಾ ಹಿಂಸಾಚಾರದ ವಿಷಯವನ್ನು ಸರಿಯಾಗಿ ನಿರ್ವಹಿಸಿರಲಿಲ್ಲ ಎಂಬ ಆಪಾದನೆಗಳಿವೆ.

Join Whatsapp
Exit mobile version