ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಹೊರಡಿಸಿದ ಹೊಸ ನಿಯಮದ ಪ್ರಕಾರ ಭಾರತದಲ್ಲಿ ಹಳೆಯ ವಾಹನಗಳ ನೋಂದಣಿ ನವೀಕರಣ ಶುಲ್ಕವು ಏಪ್ರಿಲ್ 1 ರಿಂದ 8 ಪಟ್ಟು ಹೆಚ್ಚಾಗುತ್ತದೆ.
MoRTH ನ ತೀರ್ಪಿನ ಪ್ರಕಾರ, ನಿಮ್ಮ 15 ವರ್ಷ ಹಳೆಯ ಕಾರ್ ನವೀಕರಿಸಲು ಪ್ರಸ್ತುತ 600 ರೂ. ಬದಲಿಗೆ 5,000 ರೂ.ಆಗಲಿದೆ. ಆದರೆ ದೆಹಲಿಯಲ್ಲಿ ನೋಂದಣಿಯಾಗಿರುವ ವಾಹನಗಳಿಗೆ ನವೀಕರಣದ ಅವಕಾಶವೇ ಇಲ್ಲ.ಅಲ್ಲಿ 15 ವರ್ಷಕ್ಕಿಂತ ಹಳೆಯದಾದ ಎಲ್ಲಾ ಪೆಟ್ರೋಲ್ ವಾಹನಗಳು ಮತ್ತು 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳು ಮರು ನೋಂದಣಿ ಗುವುದಿಲ್ಲ. ವಾಹನ ಮಾಲೀಕರಿಗೆ ತಮ್ಮ 10 ವರ್ಷಗಳ ಹಳೆಯ ಡೀಸೆಲ್/15 ವರ್ಷ ಹಳೆಯ ಪೆಟ್ರೋಲ್ ವಾಹನಗಳನ್ನು ಎಲೆಕ್ಟ್ರಿಕ್ ಗೆ ಪರಿವರ್ತಿಸಲು ಸರ್ಕಾರವು ಒಂದು ಆಯ್ಕೆಯನ್ನು ನೀಡಿದೆ.