Home ಟಾಪ್ ಸುದ್ದಿಗಳು ಹಾಸನದಲ್ಲಿ ಕಾರು ಅಪಘಾತ | ಮಂಗಳೂರಿನ ಮೂವರು ಬಲಿ

ಹಾಸನದಲ್ಲಿ ಕಾರು ಅಪಘಾತ | ಮಂಗಳೂರಿನ ಮೂವರು ಬಲಿ

ಹಾಸನ : ಹಾಸನದ ಕೆಂಚಟ್ಟಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಕಾರು ಲಾರಿ ಹಿಂಬದಿಗೆ ಡಿಕ್ಕಿಯಾಗಿ ಮಂಗಳೂರು ಮೂಲದ ಮೂವರು ಮೃತಪಟ್ಟಿರುವ ಘಟನೆ ನಡೆದಿದೆ.

ಬೆಳ್ತಂಗಡಿ ಮೂಲದ ಯೋಗೇಶ್ ಸೇರಿದಂತೆ ಮೂವರು ಸಾವನ್ನಪ್ಪಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಹಂಪ್ಸ್ ಇದ್ದ ಕಾರಣ ಲಾರಿ ಚಾಲಕ ಬ್ರೇಕ್ ಹಾಕಿದ್ದು, ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಕಾರು ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಗಾಯಗೊಂಡವರನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಹಾಸನ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Join Whatsapp
Exit mobile version