Home ರಾಷ್ಟ್ರೀಯ ವಸತಿ ಕಟ್ಟಡ ಕುಸಿದು 11 ಮಂದಿ ಸಾವು

ವಸತಿ ಕಟ್ಟಡ ಕುಸಿದು 11 ಮಂದಿ ಸಾವು

ವಸತಿ ಕಟ್ಟಡವೊಂದು ಕುಸಿದ ಪರಿಣಾಮ ಕನಿಷ್ಠ 11 ಮಂದಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಮುಂಬೈಯ ಮಲಾಡ್ ವೆಸ್ಟ್ ನ ನ್ಯೂ ಕಲೆಕ್ಟರ್ ಕಂಪೌಂಡ್ ನಲ್ಲಿ ಬುಧವಾರ ರಾತ್ರಿ ನಡೆದಿದೆ.


ಏಳು ಮಂದಿ ದುರಂತದಲ್ಲಿ ಗಾಯಗೊಂಡಿದ್ದು, ಕಟ್ಟಡದಲ್ಲಿ ಸಿಲುಕಿರುವವರ ರಕ್ಷಣೆಗೆ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಎರಡು ಮಹಡಿಯ ಕಟ್ಟಡ ಇದಾಗಿದ್ದು, ಭಾರೀ ಮಳೆಗೆ ಕಟ್ಟಡ ಕುಸಿದಿದೆ ಎನ್ನಲಾಗಿದೆ.


ಮಾಲ್ವಾನಿ ಗೇಟ್ ನಂ 8 ಪ್ರದೇಶದ ಅಬ್ದುಲ್ ಹಮೀದ್ ರಸ್ತೆಯಲ್ಲಿರುವ ನ್ಯೂ ಕಲೆಕ್ಟರ್ ಕಾಂಪೌಂಡ್ ಕೊಳೆಗೇರಿಯಲ್ಲಿ ರಾತ್ರಿ 11.10 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಬಿಎಂಸಿ ವಿಪತ್ತು ನಿರ್ವಹಣಾ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp
Exit mobile version