Home ಟಾಪ್ ಸುದ್ದಿಗಳು ರಾಜ್ಯದಲ್ಲಿ ಶೀಘ್ರದಲ್ಲೇ ಸೈಬರ್ ಭದ್ರತಾ ನೀತಿ ಜಾರಿ: ಸಿ ಎನ್ ಅಶ್ವಥ್ ನಾರಾಯಣ

ರಾಜ್ಯದಲ್ಲಿ ಶೀಘ್ರದಲ್ಲೇ ಸೈಬರ್ ಭದ್ರತಾ ನೀತಿ ಜಾರಿ: ಸಿ ಎನ್ ಅಶ್ವಥ್ ನಾರಾಯಣ

ಬೆಂಗಳೂರು: ಸೈಬರ್ ಬೆದರಿಕೆಗಳನ್ನು ಎದುರಿಸಲು ಸರ್ಕಾರ ಸೈಬರ್ ಭದ್ರತಾ ನೀತಿಯನ್ನು ಪ್ರಾರಂಭಿಸಲಿದ್ದು, ರಾಜ್ಯದ ಡೇಟಾ ಸೆಂಟರ್, ವೈಡ್-ಏರಿಯಾ ನೆಟ್‌ವರ್ಕ್ ಮತ್ತು ಇ-ಆಡಳಿತ ಅಪ್ಲಿಕೇಶನ್‌ಗಳಂತಹ ರಾಜ್ಯದ ಐಟಿ ಆಸ್ತಿಗಳನ್ನು ರಕ್ಷಿಸುವ ಗುರಿಯನ್ನು ಈ ನೀತಿಯು ಹೊಂದಿದೆ ಎಂದು ಐಟಿ/ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಸಿ ಎನ್ ಅಶ್ವಥ್ ನಾರಾಯಣ ಹೇಳಿದ್ದಾರೆ.

ಅಸೋಚಾಮ್ ನ 12 ನೇ ಜಾಗತಿಕ ಶೃಂಗಸಭೆಯಲ್ಲಿ ‘ವಂಚನೆ ಮತ್ತು ನ್ಯಾಯಶಾಸ್ತ್ರ: ಹೊರಹೊಮ್ಮುವ ಪ್ರವೃತ್ತಿಗಳು ಮತ್ತು ಎದುರಿಸುವ ಸವಾಲುಗಳ ಕುರಿತು ಮಾತನಾಡಿದ ಅವರು, ಈ ಕ್ರಮ ಡಿಜಿಟಲ್ ಆರ್ಥಿಕತೆಯ ಸುಸ್ಥಿರತೆಯನ್ನು ಉತ್ತೇಜಿಸಲು ಮತ್ತು ಹೊಸ ಆವಿಷ್ಕಾರದ ಸಾಮರ್ಥ್ಯವನ್ನು ತಿಳಿಯುವ ಗುರಿ ಹೊಂದಿದೆ. ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು ನಮಗೆ ಮಿತಿಯಿಲ್ಲದ ಅವಕಾಶಗಳನ್ನು ಪ್ರಸ್ತುತಪಡಿಸುವಂತೆಯೇ,ಹೊಸ ಪೀಳಿಗೆಯ ಬೆದರಿಕೆಗಳನ್ನೂ ಪ್ರಸ್ತುತಪಡಿಸುತ್ತವೆ.ಆದ್ದರಿಂದ ಅವುಗಳನ್ನು ನಾವು ಎದುರಿಸಲು ಹೊಂದಿಕೊಳ್ಳಬೇಕು ಎಂದರು.

ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, 2020-21ರಲ್ಲಿ ವಾಣಿಜ್ಯ ಬ್ಯಾಂಕುಗಳು 1.38 ಟ್ರಿಲಿಯನ್ ಮೌಲ್ಯದ ವಂಚನೆಗಳನ್ನು ವರದಿ ಮಾಡಿವೆ. ಖಾಸಗಿ ವಲಯದ ಬ್ಯಾಂಕ್‌ಗಳು ಕಾರ್ಡ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್‌ಗೆ ಸಂಬಂಧಿಸಿದಂತೆ ಹೆಚ್ಚಿನ ಸಂಖ್ಯೆಯ ವಂಚನೆಗಳನ್ನು ವರದಿ ಮಾಡುವ ಪ್ರವೃತ್ತಿಯು ಹೆಚ್ಚುತ್ತಿದೆ ಎಂದು ಅವರು ಹೇಳಿದರು.

Join Whatsapp
Exit mobile version