Home ಟಾಪ್ ಸುದ್ದಿಗಳು ಮ್ಯಾನ್ಮಾರ್‌ | ಮಿಲಿಟರಿ ದಂಗೆ ವಿರೋಧಿಸಿ ಮತ್ತೆ ಬೀದಿಗಿಳಿದ ಜನ

ಮ್ಯಾನ್ಮಾರ್‌ | ಮಿಲಿಟರಿ ದಂಗೆ ವಿರೋಧಿಸಿ ಮತ್ತೆ ಬೀದಿಗಿಳಿದ ಜನ

ಯಾಂಗೂನ್‌: ಮ್ಯಾನ್ಮಾರ್ ನಲ್ಲಿ ಮಿಲಿಟರಿ ದಂಗೆಯನ್ನು ವಿರೋಧಿಸಿ ಜನರು ಮತ್ತೆ ಪ್ರತಿಭಟನೆ ಆರಂಬಿಸಿದ್ದಾರೆ.

ದೇಶದ ದೊಡ್ಡ ನಗರವಾದ ಯಾಂಗೂನ್‌ನಲ್ಲಿ ಮಂಗಳವಾರ ಪ್ರತಿಭಟನಕಾರರು ಬೀದಿಗಿಳಿದಿದ್ದಾರೆ. ಪ್ರಮುಖ ಸ್ಥಳವಾದ ಹೇಡನ್‌ ಸೆಂಟರ್‌ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಜಮಾಯಿಸಿರುವ ಜನರು, ಮಿಲಿಟರಿ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸೋಮವಾರವೂ ದೇಶದಾದ್ಯಂತ ಪ್ರತಿಭಟನೆ ನಡೆದಿತ್ತು. ಅಂದಿನ ಸಂಖ್ಯೆಗೆ ಹೋಲಿಸಿದರೆ ಮಂಗಳವಾರ ಪ್ರತಿಭಟನಕಾರರ ಸಂಖ್ಯೆ ಕಡಿಮೆ ಇತ್ತು.

ಗುಂಪನ್ನು ಚದುರಿಸಲು ಶನಿವಾರ ಭದ್ರತಾ ಪಡೆಗಳು ಹಾರಿಸಿದ ಗುಂಡಿಗೆ ಇಬ್ಬರು ಮೃತಪಟ್ಟಿದ್ದರು. ಈ ಪೈಕಿ 37 ವರ್ಷದ ಥೆಟ್‌ ನೈಂಗ್‌ ವಿನ್‌ ಎಂಬುವವರ ಅಂತ್ಯಸಂಸ್ಕಾರ ಮಂಡಲೇ ನಗರದಲ್ಲಿ ನೆರವೇರಿತು.

Join Whatsapp
Exit mobile version