Home ರಾಜ್ಯ ಮೊಸಳೆ ಕಣ್ಣೀರಿಗಾಗಿ ಪ್ರಧಾನಿ ಮೋದಿಗೆ ಆಸ್ಕರ್ ಪ್ರಶಸ್ತಿ ನೀಡಬೇಕು; ಪ್ರಕಾಶ್ ರಾಥೋಡ್

ಮೊಸಳೆ ಕಣ್ಣೀರಿಗಾಗಿ ಪ್ರಧಾನಿ ಮೋದಿಗೆ ಆಸ್ಕರ್ ಪ್ರಶಸ್ತಿ ನೀಡಬೇಕು; ಪ್ರಕಾಶ್ ರಾಥೋಡ್

ಬೆಂಗಳೂರು: ಮೊಸಳೆ ಕಣ್ಣೀರಿಗಾಗಿ ದೇಶದಲ್ಲಿ ಆಸ್ಕರ್ ಪ್ರಶಸ್ತಿ ಕೊಡುವುದಾದರೆ ಅದು ಮೋದಿಗೆ ಕೊಡಬೇಕು ಎಂದು ಎಂಎಲ್ಸಿ, ಕೆಪಿಸಿಸಿ ವಕ್ತಾರ ಪ್ರಕಾಶ್ ರಾಥೋಡ್ ಹೇಳಿದ್ದಾರೆ. ಅವರು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಕರೆದಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಸದಾ ಸುಳ್ಳುಗಳನ್ನೇ ಹೇಳಿ ಪ್ರಧಾನಿ ಮೋದಿಗೆ ದೇಶದ ಜನತೆಗೆ ಮೋಸ ಮಾಡಿದ್ದಾರೆ.‌ ಮೋದಿ ದೊಡ್ಡ ಸುಳ್ಳುಗಾರ ಎಂದು ಹೇಳಿದ್ದು ಪ್ರಧಾನಿ ಮೋದಿ ಮತ್ತು ಕೋವಿಡ್ ನಿರ್ವಹಣೆಯಲ್ಲಿ ಸರಕಾರ ಸಂಪೂರ್ಣ ವೈಫಲ್ಯವಾಗಿದೆ ಪ್ರಕಾಶ್ ರಾಥೋಡ್ ಆರೋಪಿಸಿದ್ದು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.‌

ಕೇವಲ 18 ದಿವಸದಲ್ಲಿ ಕೋವಿಡ್ ನಿಯಂತ್ರಣ ಮಾಡುತ್ತೇನೆ ಎಂದು ಹೇಳಿದ್ದ ಮೋದಿಯವರು ದೇಶದ ಜನತೆಗೆ ಸುಳ್ಳನ್ನು ಹೇಳಿದ್ದಾರೆ. ಒಂದೂವರೆ ವರ್ಷ ಕಳೆದರೂ ಕೋವಿಡ್ ನಿಯಂತ್ರಣ ಮಾಡಲು ಅವರಿಂದ ಸಾಧ್ಯವಾಗಿಲ್ಲ. ನಿಯಂತ್ರಣದ ಬದಲಿಗೆ ಪ್ರತಿದಿನ ಹೆಚ್ಚಾಗುತ್ತಲೇ ಇದೆ. ಮೋದಿಯವರಿಗೆ ಜನರ ಮೇಲೆ ಕಾಳಜಿ ಇಲ್ಲ. ಕೋವಿಡ್ ದೇಶಕ್ಕೆ ಕಾಲಿಡಲು ಮೋದಿಯವರೇ ನೇರ ಕಾರಣ ಎಂದು ಹೇಳಿದ್ದು ಪ್ರಧಾ‌ನಿ ಮೋದಿ ವಿರುದ್ಧ ರಾಥೋಡ್ ವಾಗ್ದಾಳಿ ನಡೆಸಿದ್ದಾರೆ.‌

ಬಿಜೆಪಿ ಸಾಮಾಜಿಕ ಜಾಲತಾಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಟೂಲ್ ಕಿಟ್ ವಿಷಯವಾಗಿ ಬಿಜೆಪಿಗೆ ಸ್ವತಃ ಟ್ವಿಟರ್ ಗೆ ಪ್ರತಿಕ್ರಿಯೆ ನೀಡಿದ್ದು ಅವರ ಬಂಡವಾಳ ಸಮಾಜಕ್ಕೆ ಗೊತ್ತಾಗಿದೆ. ಸುಳ್ಳು ಸುದ್ದಿ ಯನ್ನು ಬಿಜೆಪಿ ಮತ್ತು ಸರಕಾರ ಮಾಡುತ್ತಿದೆ. ಕೋವಿಡ್ ನಿಯಂತ್ರಣವನ್ನು ಮುಚ್ಚಿ ಹಾಕಲು ಬಿಜೆಪಿ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದೆ. ದೇಶವು ಇಂದು ಬಾಂಗ್ಲಾದೇಶಗಿಂತಲೂ ಕಡೆಗೆ ಹೋಗುವಂತೆ ಬಿಜೆಪಿ ಸರಕಾರ ಮಾಡಿದೆ ಎಂದು ಪ್ರಕಾಶ್ ರಾಥೋಡ್ ಹೇಳಿದ್ದಾರೆ.

ತೇಜಸ್ವಿ ಸೂರ್ಯ ಮತ್ತು ಶೋಭಾ ಕರಂದ್ಲಾಜೆಗೆ ನಾಚಿಕೆಯಾಗಬೇಕು. ಇಂತಹ ಸಂದರ್ಭಗಳಲ್ಲೂ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಧರ್ಮಗಳ ಆಧಾರದಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿಯು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡಲು ಹೊರಟಿದೆ. ಕಾಂಗ್ರೆಸ್ ಸಂಸದ ನಾಸಿರ್ ಹುಸೈನ್ ಬ್ರಹ್ಮನ ಸಮುದಾಯದವರೊಬ್ಬರ ಅಂತ್ಯ ಸಂಸ್ಕಾರ ಮತ್ತು ಎಲ್ಲಾ ರೀತಿಯ ವಿಧಿವಿಧಾನಗಳನ್ನು ಅವರ ಮಗನಾಗಿ ಮಾಡಿದ್ದಾರೆ ಎಂದು ಹೇಳಿದರು.

ಮೋದಿ ದೇಶದ ಪ್ರಧಾನಿಯಾಗದೆ ಗುಜರಾತ್ ಪ್ರಧಾನಿಯಾಗಿದ್ದಾರೆ. ಪ್ರತಿಯೊಂದು ಕ್ಷೇತ್ರದಲ್ಲೂ ಗುಜರಾತಿಗರನ್ನೇ ಅವರು ಆಯ್ಕೆ ಮಾಡುತ್ತಿದ್ದು, ಹಾಗಾಗಿ ಅವರು ಗುಜರಾತಿನ ಪ್ರಧಾನಿಯಾಗಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಎಮ್ ಎಲ್ ಸಿ ಗಳಾದ ನಸಿಋ್ ಅಹ್ಮದ್, ಎಲ್ ರವಿ, ಪಿಆರ್ ರಮೇಶ್, ರಾಮಚಂದ್ರಪ್ಪ, ಸಲೀಮ್ ಉಪಸ್ಥಿತರಿದ್ದರು.

Join Whatsapp
Exit mobile version