Home ಟಾಪ್ ಸುದ್ದಿಗಳು ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರೀದಿ ಮಗಳನ್ನು ವಿವಾಹವಾಗಲಿರುವ ಪಾಕಿಸ್ತಾನದ ಸ್ಪೀಡ್ ಬೌಲರ್ ಶಾಹಿನ್ ಅಫ್ರೀದಿ

ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರೀದಿ ಮಗಳನ್ನು ವಿವಾಹವಾಗಲಿರುವ ಪಾಕಿಸ್ತಾನದ ಸ್ಪೀಡ್ ಬೌಲರ್ ಶಾಹಿನ್ ಅಫ್ರೀದಿ

ಇಸ್ಲಾಮಾಬಾದ್ : ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರೀದಿ ಮಗಳು ಅನ್ಶಾ ಅಫ್ರೀದಿಯನ್ನು ಸ್ಪೀಡ್ ಬೌಲರ್ ಶಾಹಿನ್ ಅಫ್ರೀದಿ ಮದುವೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಪಾಕಿಸ್ತಾನದಲ್ಲಿ ಜಿಯೋ ವಾಹಿನಿಯೊಂದಿಗೆ ಮಾತನಾಡಿದ ಶಾಹಿನ್ ಅಫ್ರೀದಿ ಈ ಕುರಿತು ಮಾಹಿತಿ ನೀಡಿ, ಖಚಿತತೆ ನೀಡಿದ್ದಾರೆ.

ಹಲವು ವರ್ಷಗಳಿಂದ ನಾವಿಬ್ಬರೂ ಪರಿಚಯಸ್ಥರಾಗಿದ್ದೇವೆ. ಅತೀ ಶೀಘ್ರದಲ್ಲೇ ಅನ್ಶಾ ಜೊತೆ ವಿವಾಹ ಜೀವನಕ್ಕೆ ಕಾಲಿಡಲಿದ್ದೇನೆ ಎಂದು ಶಾಹಿನ್ ಹೇಳಿದ್ದಾರೆ.

ಅನ್ಶಾ ನನ್ನ ಹೃದಯ ಕದ್ದಿದ್ದಾರೆ. ನಾನೂ ಕೂಡ ಅನ್ಶಾ ಪ್ರೀತಿಗೆ ವಾಲಿದ್ದೇನೆ. ಅತೀ ಶೀಘ್ರದಲ್ಲಿ ಮದುವೆಯಾಗಲಿದ್ದೇವೆ ಎಂದಿದ್ದಾರೆ.

ಶಾಹಿನ್ ಅಫ್ರೀದಿ ಎರಡೂ ಕಡೆಯಿಂದ ಈ ಮದುವೆಗೆ ಒಪ್ಪಿಗೆ ಸೂಚಿಸಲಾಗಿದ್ದು, ಶಾಹಿನ್ ಅಫ್ರೀದಿಗೆ ಕೇವಲ 22 ವರ್ಷ ತುಂಬಿದೆ. ಇಷ್ಟು ಬೇಗ ಮದುವೆಯಾಗಿತ್ತಿದ್ದೀರಾ ಎಂದು ವರದಿಗಾರ ಕೇಳಿದ್ದಕ್ಕೆ ಅನ್ಶಾ ನನ್ನ ಹೃದಯ ಕದ್ದಿದ್ದಾಳೆ ಎಂದಿದ್ದಾರೆ.

Join Whatsapp
Exit mobile version