Home ಕರಾವಳಿ ಮಂಗಳೂರಿನ ಬೆಥನಿ ಸಮೂಹ ಸಂಸ್ಥೆಯ 19 ಮಂದಿಗೆ ಕೋವಿಡ್ ದೃಢ

ಮಂಗಳೂರಿನ ಬೆಥನಿ ಸಮೂಹ ಸಂಸ್ಥೆಯ 19 ಮಂದಿಗೆ ಕೋವಿಡ್ ದೃಢ

ಮಂಗಳೂರಿನ ಬೆಥನಿ ಸಮೂಹ ಸಂಸ್ಥೆಯ 19 ಮಂದಿಗೆ ಕೋವಿಡ್ ದೃಢಪಟ್ಟಿದೆ ಎಂದು ತಿಳಿದುಬಂದಿದೆ.

ಬೆಂದೂರ್ ವೆಲ್ ಬಳಿಯ ಬೆಥನಿ ಎಜ್ಯುಕೇಶನ್ ಸೊಸೈಟಿಯ ಓರ್ವ ಸಿಸ್ಟರ್ ಗೆ ಪಾಸಿಟಿವ್ ವರದಿಯಾದ ಹಿನ್ನೆಲೆಯಲ್ಲಿ 90 ಜನರ ಪರೀಕ್ಷೆ ನಡೆಸಲಾಗಿದ್ದು, 19 ಮಂದಿಗೆ ಕೋವಿಡ್ ದೃಢಪಟ್ಟಿದೆ.

ಸದ್ಯ ಬೆಥನಿ ಎಜ್ಯುಕೇಶನ್ ಸೊಸೈಟಿ ಸೇರಿ ಇತರೆ ಸಂಸ್ಥೆಗಳನ್ನು ಸೀಲ್ ಡೌನ್ ಮಾಡಿ ಸಂಸ್ಥೆಗಳಿಗೆ ‌ಬೀಗ ಜಡಿದು ಕಾನ್ವೆಂಟ್ ಗಳಲ್ಲಿ ಸೋಂಕಿತರಿಗೆ ಕ್ವಾರೆಂಟೈನ್ ವ್ಯವಸ್ಥೆ ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ಬೆಂದೂರ್ ವೆಲ್ ಚರ್ಚ್ ಸೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಚ್ಚರಿಕೆಯಿಂದಿರಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಬೆಥನಿ ಸಂಸ್ಥೆಯ ಪ್ರದೇಶಗಳನ್ನು ಕಂಟೋನ್ಮೆಂಟ್ ಝೋನ್ ಆಗಿ ಘೋಷಿಸಲಾಗಿದೆ.

Join Whatsapp
Exit mobile version