ಬೆಂಗಳೂರು: ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ಬೇಗೆ ದಿನೇ ದಿನೆ ಹೆಚ್ಚುತ್ತಿದೆ. ಬಿಸಿಲ ಝಳ ತಾಳಲಾರದೆ ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದು, ಎಳನೀರಿನ ಬೆಲೆ ಕೇಳಿ ಹೌಹಾರುವಂತಾಗಿದೆ.
ಎಳನೀರು ವರ್ಷಪೂರ್ತಿಯೂ ಬಹುತೇಕರ ನೆಚ್ಚಿನ ಪಾನೀಯ. ಅದರಲ್ಲೂ ಬಿಸಿಲಿನ ಬೇಗೆಯಿಂದ ಪಾರಾಗಲು ಜನರು ಆರೋಗ್ಯಯುತ ಎಳನೀರು ಸೇವಿಸುತ್ತಾರೆ. ಆದರೆ, ಎಳನೀರು ಪೂರೈಕೆಯಲ್ಲಿ ವಿಳಂಬದಿಂದಾಗಿ ಬೆಲೆ ಗಗನಕ್ಕೇರಿದೆ. ಅನಿವಾರ್ಯವಾಗಿ ಕೇಳಿದಷ್ಟು ಹಣ ನೀಡಿ ಸೇವಿಸುವಂತಾಗಿದೆ.
ಒಂದು ಎಳನೀರಿಗೆ 50 ರೂ. ಇದ್ದ ಬೆಲೆ ಈಗ 70 ರೂ.ಬಂದು ತಲುಪಿದ್ದು, ದಾಹ ತೀರಿಸುತ್ತಿದ್ದ ನೈಸರ್ಗಿಕ ಪಾನೀಯದ ಬೆಲೆ ಏಕದಮ್ ಏರಿರುವುದು ಜನರಿಗೆ ಹೊರೆಯಾಗುತ್ತಿದೆ.
ಬಿಸಿಲಿನ ಜಳ ಹೆಚ್ಚುತ್ತಿರುವುದರಿಂದ ಬೇಡಿಕೆ ಹೆಚ್ಚಾಗಿದ್ದು, ಬೆಲೆ ಕೂಡ ಹೆಚ್ಚುತ್ತಿದೆ.
25 ರಿಂದ 40 ರೂ.ಗಳ ಅಗ್ಗದ ದರದ ಎಳನೀರನ್ನು ಆಯ್ಕೆ ಮಾಡುವವರು, ಒಂದು ಬಾಯಿಗೆ ಸಿಗುವಷ್ಟು ನೀರು ಸಿಗುವುದಿಲ್ಲ. ಕಾಯಿ ಕೂಡ ಸಿಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬೇಸಿಗೆಯ ತಿಂಗಳುಗಳಲ್ಲಿ ಬೆಲೆಗಳು ಏರುವುದು, ಮಳೆಗಾಲದಲ್ಲಿ ಇಳಿಕೆಯಾಗುವುದು ಸಾಮಾನ್ಯ. ಈ ವರ್ಷ ಏಳನೀರಿಗೆ ಬೇಡಿಕೆ ಹೆಚ್ಚಾಗಿದ್ದು, ಪೂರೈಕೆ ಕಡಿಮೆಯಾಗಿದೆ ಎಂದು ಮಾರಾಟಗಾರರು ಹೇಳಿದ್ದಾರೆ.
ನೆಚ್ಚಿನ ಪಾನೀಯ: