Home ಟಾಪ್ ಸುದ್ದಿಗಳು ಬಾಲಕೋಟ್ ವಾಯು ದಾಳಿ: ಪಾಕ್ ರಾಯಭಾರಿ ಹೇಳಿಕೆ ಕುರಿತು ಭಾರತೀಯ ಮಾಧ್ಯಮಗಳಿಂದ ಸುಳ್ಳು ವರದಿ

ಬಾಲಕೋಟ್ ವಾಯು ದಾಳಿ: ಪಾಕ್ ರಾಯಭಾರಿ ಹೇಳಿಕೆ ಕುರಿತು ಭಾರತೀಯ ಮಾಧ್ಯಮಗಳಿಂದ ಸುಳ್ಳು ವರದಿ


2019ರ ಫೆಬ್ರವರಿ 26ರಂದು ನಡೆದ ಬಾಲಕೋಟ್ ವಾಯುದಾಳಿಯಲ್ಲಿ ಪಾಕಿಸ್ತಾನ ಕಡೆಯ 300 ಮಂದಿ ಸಾವನ್ನಪ್ಪಿದ್ದರು ಎಂದು ಪಾಕಿಸ್ತಾನಿ ರಾಯಭಾರಿ ಅಘಾ ಹಿಲಲಿ ಮಾಧ್ಯಮ ಚರ್ಚೆಯೊಂದರ ವೇಳೆ ಒಪ್ಪಿರುವುದಾಗಿ ಜನವರಿ 9ರ ಶುಕ್ರವಾರದಂದು ಭಾರತೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿದ್ದವು.
ಬಾಲಕೋಟ್ ದಾಳಿಯ ನಂತರ ಉನ್ನತ ಸರಕಾರಿ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು 300 ಮಂದಿ ಸಾವನ್ನಪ್ಪಿರುವುದಾಗಿ ವರದಿ ಮಾಡಿದ್ದವು. ಆದರೆ ಯಾವುದೇ ಸಾವುನೋವು ಸಂಭವಿಸಿಲ್ಲವೆಂದು ಅಂತಾರಾಷ್ಟ್ರೀಯ ಮಾಧ್ಯಮಗಳು ನಂತರದಲ್ಲಿ ಪ್ರಕಟಿಸಿದ್ದವು.
“ಭಾರತ ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ಯುದ್ದವನ್ನು ನಡೆಸಿತು. ಅದರಲ್ಲಿ 300 ಮಂದಿ ಸಾವನ್ನಪ್ಪಿದ್ದಾರೆ. ನಮ್ಮ ಗುರಿ ಅವರಿಗಿಂತ ಭಿನ್ನವಾಗಿತ್ತು. ನಾವು ಅವರ ಉನ್ನತ ಕಮಾಂಡ್ ಗಳನ್ನು ಗುರಿಪಡಿಸಿದೆವು. ಅದು ನಮ್ಮ ನ್ಯಾಯಬದ್ಧ ಗುರಿಯಾಗಿತ್ತು. ಏಕೆಂದರೆ ಅವರು ಸೇನೆಯವರಾಗಿದ್ದರು” ಎಂದು ಟಿವಿ ಚರ್ಚೆಯ ವೇಳೆ ಹಿಲಲಿ ಹೇಳಿರುವುದಾಗಿ ಭಾರತೀಯ ಮಾಧ್ಯಮಗಳು ವರದಿ ಮಾಡಿದ್ದವು.
ಆದರೆ ಇದೊಂದು ಸುಳ್ಳು ಸುದ್ದಿ ಮತ್ತು ತಿರುಚಲಾದ ವೀಡಿಯೊವೆಂಬುದನ್ನು ಫ್ಯಾಕ್ಟ್ ಚೆಕ್ ವೆಬ್ ಸೈಟ್ ‘ಆಲ್ಟ್ ನ್ಯೂಸ್’ ವರದಿ ಮಾಡಿದೆ.


“ನಾವು ಈ ಚರ್ಚೆಯನ್ನು ಯೂಟೂಬ್ ನಲ್ಲಿ ಪರಿಶೀಸಿದ್ದು, ಅದನ್ನು ‘ಅಜೆಂಡಾ ಪಾಕಿಸ್ತಾನ’ ಎಂಬ ಕಾರ್ಯಕ್ರಮದ ಭಾಗವಾಗಿ HUM news ಅಪ್ಲೋಡ್ ಮಾಡಿತ್ತು. ಅದರಲ್ಲಿ ಝಫರ್ ಹಿಲಲಿ “ಭಾರತ ಮಾಡಿರುವುದು ಒಂದು ಯುದ್ಧವನ್ನು. ಅಂತಾರಾಷ್ಟ್ರೀಯ ಗಡಿಯನ್ನು ದಾಟುವ ಮೂಲಕ ಭಾರತ ಯುದ್ಧ ಕೃತ್ಯವನ್ನು ಮಾಡಿತು. ಅದರಲ್ಲಿ ಕನಿಷ್ಠ 300 ಮಂದಿಯನ್ನು ಕೊಲ್ಲುವ ಉದ್ದೇಶವನ್ನು ಅವರು ಹೊಂದಿದ್ದರು” ಎಂದು ಹೇಳಿದ್ದರು. ಎಲ್ಲಿಯೂ ಬಾಲಕೋಟ್ ನಲ್ಲಿ 300 ಮಂದಿಯನ್ನು ಕೊಂದಿದ್ದಾರೆ ಎಂದು ಪಾಕ್ ರಾಯಭಾರಿ ಹೇಳಿರುವುದು ಕೇಳಿಸುವುದಿಲ್ಲ” ಎಂದು ಆಲ್ಟ್ ನ್ಯೂಸ್ ಹೇಳಿದೆ.

https://twitter.com/Mave_Intel/status/1347858893137874944?ref_src=twsrc%5Etfw%7Ctwcamp%5Etweetembed%7Ctwterm%5E1347858893137874944%7Ctwgr%5E%7Ctwcon%5Es1_&ref_url=https%3A%2F%2Fwww.altnews.in%2Findian-media-falsely-claims-pak-diplomat-admits-300-killed-in-balakot-airstrike%2F

ಮೂಲ ವೀಡಿಯೊವನ್ನು ಯಾವುದೇ ಭಾರತೀಯ ಮಾಧ್ಯಮಗಳು ವರದಿ ಮಾಡಿಲ್ಲ.’ ರಿಪಬ್ಲಿಕ್’ ಮತ್ತು ‘ಎನ್ಇ ನೌ’ ಸುದ್ದಿ ಚಾನೆಲ್ ಗಳು ಟ್ವಿಟ್ಟರ್ ಬಳಕೆದಾರನೋರ್ವ ಪೋಸ್ಟ್ ಮಾಡಿದ ತಿರುಚಿದ ವೀಡಿಯೊವನ್ನು ಪೋಸ್ಟ್ ಮಾಡಿದ್ದವು ಎಂದು ಆಲ್ಟ್ ನ್ಯೂಸ್ ಬಹಿರಂಗಪಡಿಸಿದೆ. ನಂತರದಲ್ಲಿ ಇತರ ಮಾಧ್ಯಮಗಳೂ ಈ ವೀಡಿಯೊವನ್ನು ಪ್ರಕಟಿಸಿದ್ದವು.

Join Whatsapp
Exit mobile version