Home ಟಾಪ್ ಸುದ್ದಿಗಳು ಬಾಬ್ರಿ ಧ್ವಂಸ ತೀರ್ಪು: ನ್ಯಾಯಾಲಯಕ್ಕೆ ಗೈರಾಗಲಿರುವ ಅಡ್ವಾಣಿ, ಜೋಶಿ, ಕಲ್ಯಾಣ್ ಸಿಂಗ್

ಬಾಬ್ರಿ ಧ್ವಂಸ ತೀರ್ಪು: ನ್ಯಾಯಾಲಯಕ್ಕೆ ಗೈರಾಗಲಿರುವ ಅಡ್ವಾಣಿ, ಜೋಶಿ, ಕಲ್ಯಾಣ್ ಸಿಂಗ್


ನವದೆಹಲಿ: 28 ವರ್ಷ ಹಳೆಯ ಬಾಬರಿ ಮಸೀದಿ ಉರುಳಿಸಿದ ಪ್ರಕರಣದ ಮುಖ್ಯ ಆರೋಪಿಗಳು ಇಂದು ನ್ಯಾಯಾಲಯಕ್ಕೆ ಹಾಜರಾಗಲಾರರು ಎಂಬುದು ಸ್ಪಷ್ಟವಾಗಿದೆ.

ಆರೋಪಿಗಳಾದ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಉಮಾ ಭಾರತಿ ಮತ್ತು ಕಲ್ಯಾಣ್ ಸಿಂಗ್ ನ್ಯಾಯಾಲಯಕ್ಕೆ ಗೈರಾಗಲಿರುವುದು ಖಚಿತವಾಗಿದೆ. 92 ರ ಹರೆಯದ ಅಡ್ವಾಣಿ ಮತ್ತು 86 ವರ್ಷದ ಜೋಶಿ ಆರೋಗ್ಯ ಕಾರಣಗಳಿಂದಾಗಿ ಹಾಜರಾಗುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಉಮಾ ಭಾರತಿ ಮತ್ತು ಕಲ್ಯಾಣ್ ಸಿಂಗ್ ಅವರು ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ, ಸಾಧ್ವಿ ರಿತಂಬರ, ವಿಷ್ಣುಹರಿ ದಾಲ್ಮಿಯಾ, ಚಂಬತ್ ರಾಯ್ ಬನ್ಸಾಲ್, ಸತೀಶ್ ಪ್ರಧಾನ್, ಸತೀಶ್ ಚಂದ್ರ ಸಾಗರ್, ಬಾಳ್ ಠಾಕ್ರೆ, ಅಶೋಕ್ ಸಿಂಘಾಲ್, ಪರಮಹಂಸ, ರಾಮ್ ಚಂದ್ರ ದಾಸ್ ಮತ್ತು ಮೊರೇಶ್ವರ್ ಸಾವೆ ಈ ಪ್ರಕರಣದ ಇತರ 48 ಆರೋಪಿಗಳು.

48 ಆರೋಪಿಗಳಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ. ಸಿಬಿಐ ನ್ಯಾಯಾಧೀಶ ಸುರೇಂದರ್ ಕುಮಾರ್ ಯಾದವ್ ಅವರು ಉಳಿದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿದ್ದರು.

Join Whatsapp
Exit mobile version