Home ರಾಷ್ಟ್ರೀಯ ಪತ್ರಕರ್ತ ಅನುಮಾನಾಸ್ಪದ ಸಾವು; ಉತ್ತರ ಪ್ರದೇಶ ಪೊಲೀಸರ ವಿರುದ್ಧ ಎಡಿಟರ್ಸ್ ಗಿಲ್ಡ್ ಕಿಡಿ

ಪತ್ರಕರ್ತ ಅನುಮಾನಾಸ್ಪದ ಸಾವು; ಉತ್ತರ ಪ್ರದೇಶ ಪೊಲೀಸರ ವಿರುದ್ಧ ಎಡಿಟರ್ಸ್ ಗಿಲ್ಡ್ ಕಿಡಿ

ಉತ್ತರ ಪ್ರದೇಶದ ಪ್ರತಾಪ್ ಘಡ ಜಿಲ್ಲೆಯಲ್ಲಿ ಲಿಕ್ಕರ್ ಮಾಫಿಯಾದ ವಿರುದ್ಧ ವರದಿ ಮಾಡಿದ್ದ ಹಿನ್ನೆಲೆಯಲ್ಲಿ ತಮಗೆ ಬೆದರಿಕೆ ಇದೆ ಎಂದು ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದ ಮರು ದಿನವೇ ಪತ್ರಕರ್ತರೊಬ್ಬರು ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆಗೆ ಭಾರತದ ಎಡಿಟರ್ಸ್ ಗಿಲ್ಡ್ ತೀವ್ರ ಆಘಾತ ವ್ಯಕ್ತಪಡಿಸಿದೆ.


ಪತ್ರಕರ್ತನ ಸಾವಿನ ವಿಷಯದಲ್ಲಿ ಪೊಲೀಸರ ದುರಹಂಕಾರ ನಡೆ ಆಘಾತಕಾರಿಯಾಗಿದೆ. ತಮಗೆ ಬೆದರಿಕೆ ಕರೆ ಇದೆ, ತಮ್ಮನ್ನು ಕೆಲವು ಅಪರಿಚಿತರು ಹಿಂಬಾಲಿಸುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ಸಲ್ಲಿಸಿದ್ದರೂ ಉತ್ತರ ಪ್ರದೇಶ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗಿಲ್ಡ್ ಕಿಡಿಕಾರಿದೆ.


ಪತ್ರಕರ್ತ ಸುಲಭ್ ಶ್ರೀವಾಸ್ತವ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದರೂ, ಅವರ ಸಾವಿನಲ್ಲಿ ಅನುಮಾನಗಳಿಗೆ ಎಂದು ಕುಟುಂಬಸ್ಥರು ಆರೋಪಿಸಿದ್ದರು.
ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರದ ಅಧಿಕೃತ ಹೇಳಿಕೆಯನ್ನಷ್ಟೇ ಪ್ರಕಟಿಸಬೇಕೆಂಬ ಒತ್ತಡ ಪತ್ರಕರ್ತರ ಮೇಲಿದ್ದು, ಪೊಲೀಸರು ಮತ್ತು ಸ್ಥಳೀಯ ಆಡಳಿತ, ಪತ್ರಕರ್ತರ ಮೇಲೆ ದೇಶದ್ರೋಹ ಮತ್ತು ಯುಎಪಿಎಯಂತಹ ಪ್ರಕರಣಗಳನ್ನು ದಾಖಲಿಸುತ್ತಿದೆ. ಕೇದಾರ್ ನಾಥ್ ಸಿಂಗ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿಗೆ ವಿರುದ್ಧವಾಗಿ ಇದು ನಡೆಯುತ್ತಿದೆ. ಸರ್ಕಾರವನ್ನು ಟೀಕಿಸುವ ಪತ್ರಕರ್ತರು ಮತ್ತು ವ್ಯಂಗ್ಯಚಿತ್ರಕಾರರನ್ನು ಗುರಿಪಡಿಸಲಾಗುತ್ತಿದೆ ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಅಧ್ಯಕ್ಷರಾ ಸೀಮಾ ಮುಸ್ತಫಾ, ಪ್ರಧಾನ ಕಾರ್ಯದರ್ಶಿ ಸಂಜಯ್ ಕಪೂರ್, ಕೋಶಾಧಿಕಾರಿ ಅನಂತ್ ನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version