Home ಕರಾವಳಿ ನ್ಯಾಯವಾದಿ ಮನೆ ಮೇಲೆ ದಾಳಿ ಪ್ರಕರಣ। 24 ಗಂಟೆ ಕಳೆದರೂ ಆರೋಪಿಗಳ ಬಂಧನವಾಗದೇ ಇರುವುದು ವಿಪರ್ಯಾಸ:...

ನ್ಯಾಯವಾದಿ ಮನೆ ಮೇಲೆ ದಾಳಿ ಪ್ರಕರಣ। 24 ಗಂಟೆ ಕಳೆದರೂ ಆರೋಪಿಗಳ ಬಂಧನವಾಗದೇ ಇರುವುದು ವಿಪರ್ಯಾಸ: WIM

ಪುತ್ತೂರು: ಮಹಿಳಾ ಕಾಂಗ್ರೆಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿರುವ ನ್ಯಾಯವಾದಿ ಶೈಲಜಾ ಅಮರನಾಥ ಮನೆಗೆ ಹಾಡ ಹಗಲೇ ಸಂಘಪರಿವಾರದ ದುಷ್ಕರ್ಮಿಗಳು ದಾಳಿ ನಡೆಸಿ 24 ಗಂಟೆ ಕಳೆದಿದ್ದರೂ ಆರೋಪಿಗಳನ್ನು ಬಂಧಿಸಲು ಪೊಲೀಸ್ ಇಲಾಖೆಗೆ ಸಾಧ್ಯವಾಗದೇ ಇರುವುದು ನಾಚಿಗೇಡಿನ ಸಂಗತಿ ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಪುತ್ತೂರು ವಿಧಾನಸಭಾ ಸಮಿತಿ ಅಧ್ಯಕ್ಷೆ ಮಿಸ್ರಿಯಾ ಕಂಬಳಬೆಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಅಲ್ಲಲ್ಲಿ ಸಿಸಿ ಕೆಮಾರಗಳು ಹಾಗೂ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಅದರ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಲು ಪೋಲಿಸರು ಮುತುವರ್ಜಿ ವಹಿಸುತ್ತಿದ್ದರೆ ಈಗಾಗಲೇ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗುತ್ತಿತ್ತು. ಅದಲ್ಲದೇ ಶೈಲಜಾ ರವರ ಕಛೇರಿಯ ಮುಂಭಾಗದಲ್ಲಿ ಕೂಡ ಅವರ ಶ್ರದ್ಧಾಂಜಲಿ ಅರ್ಪಿಸಿದ ಫೋಟೊ ಹಾಕಿ ವಿಕೃತಿ ಮೆರೆದಿದ್ದಾರೆ,ಈ ಎಲ್ಲಾ ಘಟನೆಗಳನ್ನು ಅವಲೋಕಿಸಿದಾಗ ಸಂಘಪರಿವಾರದಿಂದ ಶೈಲಜಾ ಅಮರನಾಥ್ ರವರಿಗೆ ಜೀವಕ್ಕೆ ಅಪಾಯ ಇರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಹಿಂದೆ ಗೌರಿ ಲಂಕೇಶ್ ಸೇರಿದಂತೆ ಹಲವಾರು ಪ್ರಗತಿಪರರನ್ನು ಸಂಘಪರಿವಾರ ಹತ್ಯೆ ನಡೆಸುವುದಕ್ಕೆ ಪೂರ್ವ ಬಾವಿಯಾಗಿ ಈ ರೀತಿಯ ದುಷ್ಕೃತ್ಯಗಳನ್ನು ನಡೆಸಿತ್ತು.ಇದನ್ನು ಪೋಲೀಸ್ ಇಲಾಖೆ ಮತ್ತು ಸರ್ಕಾರ ಗಂಭೀರವಾಗಿ ಪರಿಗಣಿಸದೆ ಇದ್ದ ಕಾರಣದಿಂದಲೇ ಅವರ ಹತ್ಯೆಯಾಗಿತ್ತು ಎಂದು ಹೇಳಿದ್ದಾರೆ.

ಪೋಲೀಸ್ ಇಲಾಖೆ ಶೈಲಜಾ ಅಮರನಾಥ ರವರ ಮನೆ ಮೇಲೆ ನಡೆದ ದಾಳಿ ಹಾಗೂ ಅವರ ಕಛೇರಿ ಮುಂಭಾಗದಲ್ಲಿ ಶ್ರದ್ಧಾಂಜಲಿ ಅರ್ಪಿಸಿ ವಿಕೃತಿ ಮರೆದ ಪೋಸ್ಟರ್ ಅಂಟಿಸಿದ ಪ್ರಕರಣವನ್ನು ಲಘುವಾಗಿ ತೆಗೆಯದೆ ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಹಾಗೂ ಅವರನ್ನು ಛೂಬಿಟ್ಟವರನ್ನು ಕಠಿಣ ಕಾಯ್ದೆ ಅಡಿಯಲ್ಲಿ ಬಂಧಿಸಿ ಜೈಲಿಗೆ ತಳ್ಳಬೇಕು.ಹಾಗೂ ಸಂತ್ರಸ್ತೆ ಶೈಲಜಾರವರಿಗೆ ಇಲಾಖೆಯ ವತಿಯಿಂದಲೇ ಗನ್ ಮ್ಯಾನ್ ಸೌಲಭ್ಯ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇನ್ಸಾಗ್ರಾಂ ಪೇಜ್ ನಲ್ಲಿ ಕೊಲೆ ಬೆದರಿಕೆ ಹಾಕಿದನ್ನು ಗಂಭೀರವಾಗಿ ಪರಿಗಣಿಸಿ ಆದಿ ಉಡುಪಿ ಬೆತ್ತಲೆ ಪ್ರಕರಣದ ಆರೋಪಿ ಯಶ್ಪಾಲ್ ಸುವರ್ಣಾಗೆ ಗನ್‌ಮ್ಯಾನ್ ಸೌಲಭ್ಯ ನೀಡಿರುವ ಪೋಲೀಸ್ ಇಲಾಖೆಯು ನೇರ ನೇರ ದಾಳಿಗೆ ಒಳಗಾಗುವ ಸಾಧ್ಯತೆ ಇರುವ ಶೈಲಜಾ ಅಮರನಾಥ ರವರಿಗೆ ಇಬ್ಬರು ಗನ್ ಮ್ಯಾನ್ ಸೌಲಭ್ಯವನ್ನು ಒದಗಿಸಲಿ ಎಂದು ಮಿಸ್ರಿಯಾ ಕಂಬಳಬೆಟ್ಟು ವಿನಂತಿಸಿದ್ದಾರೆ.

Join Whatsapp
Exit mobile version