ಲಾಕ್ ಡೌನ್ ಸಂದರ್ಭದಿಂದ ಸಾಕಷ್ಟು ಸಹಾಯ ಮಾಡಿ ಗುರುತಿಸಿಕೊಂಡಿರುವ ಬಾಲಿವುಡ್ ನಟ ಸೋನು ಸೂದ್ ಇದೀಗ ಕೊರೋನಾ ಬಿಕ್ಕಟ್ಟಿನಿಂದ ನಿರುದ್ಯೋಗಿಗಳಾದವರಿಗೆ ಇ-ರಿಕ್ಷಾಗಳನ್ನು ಉಡುಗೊರೆಯಾಗಿ ನೀಡಿ ಸಹಾಯ ಹಸ್ತಕ್ಕೆ ಚಾಲನೆ ನೀಡಿದ್ದಾರೆ.
‘ಖುದ್ ಕಮಾವೋ ಘರ್ ಚಲಾವೋ’ ಎಂಬ ಹೆಸರಿನಲ್ಲಿ ಹೊಸದೊಂದು ಯೋಜನೆ ಆರಂಭಿಸಿ, ನಿರುದ್ಯೋಗಿಗಳಿಗೆ ಎಲೆಕ್ಟ್ರಾನಿಕ್ ಆಟೋಗಳನ್ನು ನೀಡಲು ಅವರು ಮುಂದಾಗಿದ್ದಾರೆ.
“ಜನರ ಬೇಡಿಕೆಗಳನ್ನು ಈಡೇರಿಸುವುದಕ್ಕಿಂತಲೂ, ಉದ್ಯೋಗಾವಕಾಶಗಳನ್ನು ಒದಗಿಸುವುದು ಹೆಚ್ಚು ಮುಖ್ಯ ಎಂದು ನಾನು ನಂಬುತ್ತೇನೆ. ಈ ಯೋಜನೆ ಅವರನ್ನು ಸ್ವಾವಲಂಬಿಗಳಾಗಿ ಮಾಡುವ ಮೂಲಕ ಮತ್ತೆ ತಮ್ಮ ಕಾಲುಗಳ ಮೇಲೆ ನಿಲ್ಲಲು ಸಹಾಯ ಮಾಡುತ್ತದೆ ಎನ್ನುವ ಖಾತ್ರಿ ನನಗಿದೆ” ಎಂದು ಸೋನು ಸೂದ್ ಹೇಳಿದ್ದಾರೆ.