Home ಟಾಪ್ ಸುದ್ದಿಗಳು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಸ್ವತಂತ್ರ ಸ್ಪರ್ಧೆ

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಸ್ವತಂತ್ರ ಸ್ಪರ್ಧೆ

ನವದೆಹಲಿ: ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಪಕ್ಷ ಘೋಷಿಸಿದೆ.


ಕಾಂಗ್ರೆಸ್ ಮತ್ತು ಬಿಜೆಪಿ ಎದುರು ಸ್ವತಂತ್ರವಾಗಿ ಸ್ಪರ್ಧಿಸಲು ನಾವು ಸಬಲರಾಗಿದ್ದೇವೆ ಎಂದು ಎಎಪಿ ವಕ್ತಾರ ಪ್ರಿಯಾಂಕ ಕಕ್ಕರ್ ಹೇಳಿದರು.


‘ಹರಿಯಾಣ ಚುನಾವಣೆಯಲ್ಲಿ ತನ್ನ ಮಿತ್ರಪಕ್ಷಗಳನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಲ್ಲ. ಇದರ ಪರಿಣಾಮ ಅದು ಕಡಿಮೆ ಸ್ಥಾನಗಳನ್ನು ಗೆಲ್ಲುವಂತಾಯಿತು’ ಎಂದು ಪ್ರಿಯಾಂಕ ದೂರಿದರು.


ಕಳೆದ 10 ವರ್ಷದಲ್ಲಿ ದೆಹಲಿಯಲ್ಲಿ ಕಾಂಗ್ರೆಸ್ ಶೂನ್ಯ ಸ್ಥಾನದಲ್ಲಿದೆ. ಆದರೂ ಲೋಕಸಭಾ ಚುನಾವಣೆಯಲ್ಲಿ ಎಎಪಿ ಕಾಂಗ್ರೆಸ್ ಗೆ ಮೂರು ಸ್ಥಾನ ನೀಡಿತ್ತು. ಹೀಗಿದ್ದರೂ ಹರಿಯಾಣದಲ್ಲಿ ಮಿತ್ರಪಕ್ಷವಾದ ಎಎಪಿಯನ್ನು ಕಾಂಗ್ರೆಸ್ ಜತೆ ಕರೆದುಕೊಂಡು ಹೋಗಲಿಲ್ಲ ಎಂದು ದೂರಿದ ಅವರು, ಹರಿಯಾಣದಲ್ಲಿ ಮೈತ್ರಿ ಮಾಡಿಕೊಳ್ಳಲು ಇಂಡಿಯಾ ಬಣ ಮಾಡಿದ ಎಲ್ಲಾ ಪ್ರಯತ್ನಗಳನ್ನು ಕಾಂಗ್ರೆಸ್ ವಿಫಲಗೊಳಿಸಿತ್ತು ಎಂದರು.

Join Whatsapp
Exit mobile version