Home ಟಾಪ್ ಸುದ್ದಿಗಳು ಹರಿಯಾಣದಲ್ಲಿ ಕಾಂಗ್ರೆಸ್ ಸೋಲು: ರಾಹುಲ್ ಗಾಂಧಿ ಮನೆಗೆ ಜಿಲೇಬಿ ಕಳುಹಿಸಿದ ಬಿಜೆಪಿ

ಹರಿಯಾಣದಲ್ಲಿ ಕಾಂಗ್ರೆಸ್ ಸೋಲು: ರಾಹುಲ್ ಗಾಂಧಿ ಮನೆಗೆ ಜಿಲೇಬಿ ಕಳುಹಿಸಿದ ಬಿಜೆಪಿ

ನವದೆಹಲಿ: ಹರಿಯಾಣ ಬಿಜೆಪಿ ಘಟಕವು ಮಂಗಳವಾರ ಐತಿಹಾಸಿಕ ಮೂರನೇ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದನ್ನು ಸಂಭ್ರಮದಿಂದ ಆಚರಿಸಿದೆ.


ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರಿಗೆ ಅವರ ಮನೆಗೆ ಬಿಜೆಪಿ 1 ಕೆಜಿ ಜಿಲೇಬಿಯನ್ನು ಕಳುಹಿಸಿದೆ.


ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಜಿಲೇಬಿ ಟ್ರೆಂಡಿಂಗ್ ನಲ್ಲಿದೆ.


ಹರಿಯಾಣದಲ್ಲಿ ಬಿಜೆಪಿ ಎಲ್ಲಾ ಕಾರ್ಯಕರ್ತರ ಪರವಾಗಿ ರಾಹುಲ್ ಗಾಂಧಿಯವರ ಮನೆಗೆ ಜಿಲೇಬಿಯನ್ನು ಕಳುಹಿಸಲಾಗಿದೆ ಎಂದು ಬಿಜೆಪಿ ಎಕ್ಸ್ನಲ್ಲಿ ತಿಳಿಸಿದೆ.


ದೆಹಲಿ ಮೂಲದ ಫುಡ್ ಡೆಲಿವರಿ ಆ್ಯಪ್ ಆದ ಸ್ವಿಗ್ಗಿಯ ಅಪ್ಲಿಕೇಶನ್ ನ ಸ್ಕ್ರೀನ್ಶಾಟ್ ಅನ್ನು ಎಕ್ಸ್ ನಲ್ಲಿ ಲಗತ್ತಿಸಲಾಗಿದೆ. ರಾಹುಲ್ ಗಾಂಧಿಗೆ ಸ್ವಿಗ್ಗಿಯಲ್ಲಿ ಜಿಲೇಬಿ ಕಳುಹಿಸಲಾಗಿದ್ದು, ಕ್ಯಾಶ್ ಆನ್ ಡೆಲಿವರಿ ಆಯ್ಕೆ ನೀಡಲಾಗಿದೆ! ರಾಹುಲ್ ಗಾಂಧಿಯವರೇ ಹಣ ಪಾವತಿಸಿ ಈ ಜಿಲೇಬಿ ಬಾಕ್ಸ್ ಪಡೆಯಬೇಕಾಗುತ್ತದೆ ಎಂದು ಹೇಳಿದೆ.

Join Whatsapp
Exit mobile version