Home ಟಾಪ್ ಸುದ್ದಿಗಳು ದೆಹಲಿ ಗಲಭೆ ಪ್ರಕರಣ: ಫಾತಿಮಾ ಮಸ್ಜಿದ್ ಮೇಲೆ ದಾಳಿ ಮಾಡಿದ ವ್ಯಕ್ತಿಗೆ ಜಾಮೀನು ನಿರಾಕರಣೆ

ದೆಹಲಿ ಗಲಭೆ ಪ್ರಕರಣ: ಫಾತಿಮಾ ಮಸ್ಜಿದ್ ಮೇಲೆ ದಾಳಿ ಮಾಡಿದ ವ್ಯಕ್ತಿಗೆ ಜಾಮೀನು ನಿರಾಕರಣೆ


ಹೊಸದಿಲ್ಲಿ : ಸಿಎಎ ವಿರುದ್ದ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಆಕ್ರಮಣ ನಡೆಸಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಸಂದರ್ಭದಲ್ಲಿ ಮಸೀದಿಯ ಮೇಲೆ ದಾಳಿ ನಡೆಸಿದ ಆರೋಪಿಗೆ ನ್ಯಾಯಾಲಯ ಜಾಮೀನು ನಿರಾಕರಿಸಿದೆ.
ಖಜೂರಿ ಖಾಸ್ ನ ಸಿ ಬ್ಲಾಕ್ ನಲ್ಲಿರುವ ಫಾತಿಮಾ ಮಸೀದಿಯ ಮೇಲೆ ದಾಳಿ ಮಾಡಿದ ವ್ಯಕ್ತಿಯ ಜಾಮೀನು ಅರ್ಜಿಯನ್ನು ಕಾರ್ಕಾರ್ಡ್ ಡುಮಾ ಹೆಚ್ಚುವರಿ ನ್ಯಾಯಾಧೀಶ ವಿನೋದ್ ಯಾದವ್ ತಿರಸ್ಕರಿಸಿದ್ದಾರೆ. ದೇಶದ ಜಾತ್ಯಾತೀತತೆಯ ವಿರುದ್ಧ ಕಿಡಿಗೇಡಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅರ್ಜಿದಾರನು ತನ್ನ ಹಿಂದಿನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದಾಗಿನಿಂದ ಯಾವುದೇ ಬದಲಾವಣೆಗಳನ್ನು ತೋರಿಸಲು ಸಾಧ್ಯವಾಗಲಿಲ್ಲ ಎಂದು ಲೈವ್ ಲಾ ವರದಿ ಮಾಡಿದೆ.
ಗಲಭೆಯಲ್ಲಿ ಆರೋಪಿಯು ಪ್ರಮುಖ ಪಾತ್ರ ವಹಿಸಿದ್ದನ್ನು ಪರಿಗಣಿಸಿ, ಇದು ಜಾಮೀನು ನೀಡುವ ಪ್ರಕರಣವಾಗಿ ಕಂಡುಬರುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಆರೋಪಿಯ ಪರವಾಗಿ ಸಲ್ಲಿಸಲಾದ ಐದನೇ ಜಾಮೀನು ಅರ್ಜಿ ಇದಾಗಿದೆ.

Join Whatsapp
Exit mobile version