ಪಾಟ್ನಾ : ಹಾಥರಸ್ ಘಟನೆಯ ವಿಚಾರದಲ್ಲಿ ದೇಶದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳ ವಿರುದ್ಧ ನಡೆಯುತ್ತಿರುವ ವ್ಯಾಪಕ ಪ್ರತಿಭಟನೆಗಳ ನಡುವೆಯೇ ಬಿಹಾರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ದಲಿತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಏಳು ಮಂದಿ ದುಷ್ಕರ್ಮಿಗಳ ಯ ತಂಡವು ನಂತರ ಆಕೆಯ ಮಗುವನ್ನು ಕಾಲುವೆಗೆ ಎಸೆದು ಕೊಂದಿದ್ದಾರೆ.
ಈ ಘಟನೆ ಬಿಹಾರದ ಬಕ್ಸಾರ್ ಜಿಲ್ಲೆಯಲ್ಲಿ ನಡೆದಿದೆ. ಅತ್ಯಾಚಾರದ ನಂತರ ಯುವತಿ ಮತ್ತು ಆಕೆಯ ಐದು ವರ್ಷದ ಮಗುವನ್ನು ದುಷ್ಕರ್ಮಿಗಳು ಹಿಂಸಿಸಿ ಕಾಲುವೆಗೆ ಎಸೆದಿದ್ದರು. ನಂತರ ಮಗು ನೀರಿನಲ್ಲಿ ಮುಳುಗಿ ಮೃತಪಟ್ಟಿದೆ. ಏಳು ಮಂದಿಯಲ್ಲಿ ಒಬ್ಬನನ್ನು ಬಂಧಿಸಲಾಗಿದೆ ಮತ್ತು ಈವರೆಗೆ ಎರಡು ಆರೋಪಿಗಳನ್ನು ಮಾತ್ರ ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬದುಕುಳಿದ ಯುವತಿ ಪಾಟ್ನಾದಿಂದ 135 ಕಿ.ಮೀ ದೂರದಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯುರೋ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, 2019ರಲ್ಲಿ ಸರಾಸರಿ 87 ಅತ್ಯಾಚಾರ ಪ್ರಕರಣಗಳು ಮತ್ತು 4,05,861 ಮಹಿಳೆಯರ ವಿರುದ್ಧದ ಅಪರಾದ ಪ್ರಕರಣಗಳು ನಡೆದಿದೆ. ಇದು 2018ಕ್ಕೆ ಹೋಲಿಸಿದರೆ 7% ಕ್ಕಿಂತ ಹೆಚ್ಚಾಗಿದೆ.