Home ಟಾಪ್ ಸುದ್ದಿಗಳು ಚೀನಾ ಸೇನಾ ಸಿಬ್ಬಂದಿಗಳ ಶೇ 40ರಷ್ಟು ವೇತನ ಏರಿಕೆ

ಚೀನಾ ಸೇನಾ ಸಿಬ್ಬಂದಿಗಳ ಶೇ 40ರಷ್ಟು ವೇತನ ಏರಿಕೆ

ಬೀಜಿಂಗ್: ಚೀನಾದ ಸೇನೆಯನ್ನು ಶಕ್ತಿಯುತವಾಗಿ ಮತ್ತು ಆಧುನಿಕವಾಗಿ ರೂಪಿಸುವುದರ ಭಾಗವಾಗಿ ಸೇನೆ ಸಿಬ್ಬಂದಿಗೆ ಈ ವರ್ಷದಿಂದ ಜಾರಿಗೆ ಬರುವಂತೆ ಶೇ 40ರಷ್ಟು ವೇತನ ಹೆಚ್ಚಿಸಲಾಗಿದೆ. ಸೇನೆಯ 20 ಲಕ್ಷ ಸಿಬ್ಬಂದಿಗಳು ಇದರ ಅನುಕೂಲವನ್ನು ಪಡೆಯಲಿದ್ದಾರೆ.
ವೇತನ ಏರಿಕೆ ಕುರಿತು ಅಧಿಕೃತ ಆದೇಶ ಶೀಘ್ರದಲ್ಲಿಯೇ ಹೊರಬೀಳಲಿದೆ ಎಂದು ಹಾಂಗ್‌ಕಾಂಗ್ ಮೂಲದ ಸೌತ್‌ ಚೀನಾ ಮಾರ್ನಿಂಗ್ ಪೋಸ್ಟ್ ಪತ್ರಿಕೆಯು ಈ ಕುರಿತು ವರದಿ ಮಾಡಿದೆ. ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿ (ಪಿಎಲ್‌ಎ) ಅನ್ನು ಆಧುನಿಕ ಮತ್ತು ಶಕ್ತಿಯುತ ಪಡೆಯಾಗಿ ರೂಪಿಸಲು ಕೈಗೊಂಡ ವಿವಿಧ ಸುಧಾರಣೆ ಕಾರ್ಯಕ್ರಮಗಳ ನಂತರ ಸಿಬ್ಬಂದಿ ವೇತನದಲ್ಲಿ ಏರಿಕೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

ದೊಡ್ಡ ಪ್ರಮಾಣದಲ್ಲಿ ವೇತನ ಏರಿಕೆ ಹಿಂದೆ ಸ್ಥಳೀಯ ಪ್ರತಿಭಾವಂತ, ಪ್ರತಿಭೆಗಳನ್ನು ಸೆಳೆಯುವ ಗುರಿ ಇದೆ.
ವೇತನ ಪರಿಷ್ಕರಣೆ ನಂತರ ನಾನು ಹೆಚ್ಚುವರಿಯಾಗಿ ಸುಮಾರು 72 ಸಾವಿರ ರೂ ಅನ್ನು (1000 ಡಾಲರ್) ಪಡೆಯಲಿದ್ದೇನೆ ಎಂದು ಹೆಸರು ಉಲ್ಲೇಖಿಸದೇ ಬೀಜಿಂಗ್ ಮೂಲದ ಕರ್ನಲ್‌ ಒಬ್ಬರ ಹೇಳಿಕೆಯನ್ನು ಪತ್ರಿಕೆಯು ವರದಿಯಲ್ಲಿ ಉಲ್ಲೇಖಿಸಿದೆ.

Join Whatsapp
Exit mobile version