Home ಟಾಪ್ ಸುದ್ದಿಗಳು ಕ್ಲಬ್ ಮೇಲೆ ದಾಳಿ | ಸುರೇಶ್ ರೈನಾ ಬಂಧನ ಕುರಿತಂತೆ ಮ್ಯಾನೇಜ್ಮೆಂಟ್ ನಿಂದ ಅಧಿಕೃತ ಹೇಳಿಕೆ...

ಕ್ಲಬ್ ಮೇಲೆ ದಾಳಿ | ಸುರೇಶ್ ರೈನಾ ಬಂಧನ ಕುರಿತಂತೆ ಮ್ಯಾನೇಜ್ಮೆಂಟ್ ನಿಂದ ಅಧಿಕೃತ ಹೇಳಿಕೆ ಬಿಡುಗಡೆ

ಮುಂಬೈ: ನೈಟ್ ಕ್ಲಬ್ ಒಂದರಲ್ಲಿ ಭಾಗಿಯಾಗಿದ್ದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಕೊರೋನಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂಬ ಕಾರಣದಲ್ಲಿ ಮುಂಬೈ ಪೊಲೀಸರು ಅವರನ್ನು ಬಂಧಿಸಿದ್ದು, ಬಳಿಕ ಜಾಮೀನಿನ ಮೂಲಕ ಬಿಡುಗಡೆ ಆದ ವಿಚಾರ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಘಟನೆಯ ಬಗ್ಗೆ ಅಧಿಕೃತ ಹೇಳಿಕೆಯನ್ನು ರೈನಾ ಅವರ ಮ್ಯಾನೇಜ್ಮೆಂಟ್ ಬಿಡುಗಡೆಗೊಳಿಸಿದೆ.

ಸುರೇಶ್ ರೈನಾ ಚಿತ್ರೀಕರಣದ ಹಿನ್ನೆಲೆಯಲ್ಲಿ ಮುಂಬೈಗೆ ತೆರಳಿದ್ದರು. ಆದರೆ ಚಿತ್ರೀಕರಣ ನಿಗದಿಗಿಂತ ತಡವಾಗಿ ಮುಗಿದಿತ್ತು. ಬಳಿಕ ದೆಹಲಿಗೆ ವಿಮಾನದಲ್ಲಿ ವಾಪಾಸಾಗುವ ಮುನ್ನ ಸ್ನೇಹಿತರೊಬ್ಬರು ಭೋಜನಕ್ಕಾಗಿ ಕ್ಲಬ್ ಗೆ ಆಹ್ವಾನಿಸಿದ್ದರು. ಕ್ಲಬ್ ಮೇಲೆ ದಾಳಿ ನಡೆಸಿದ ಪೊಲೀಸರು ಕೊರೋನಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ರೈನಾ ಸೇರಿದಂತೆ ಒಟ್ಟು 34 ಮಂದಿಯನ್ನು ಬಂಧಿಸಿದ್ದರು.

ರೈನಾ ಅವರಿಗೆ ಕೊರೋನಾ ನೀತಿ ಸಂಹಿತೆ ಮತ್ತು ಸಮಯದ ಬಗ್ಗೆ ಅರಿವಿರಲಿಲ್ಲ. ಈ ವಿಚಾರ ಅವರ ಅರಿವಿಗೆ ಬಂದ ಕೂಡಲೇ ಅಧಿಕಾರಿಗಳ ಕಾರ್ಯವಿಧಾನಗಳಿಗೆ ಸಹಕರಿಸಿದ್ದಾರೆ. ಈ ಉದ್ಧೇಶಪೂರ್ವಕವಲ್ಲದ ಘಟನೆಗೆ ರೈನಾ ಬೇಸರ ವ್ಯಕ್ತಪಡಿಸಿದ್ದಾರೆ.

ರೈನಾ  ಯಾವಾಗಲೂ ಸರ್ಕಾರ ನಿಯಮಗಳು ಹಾಗೂ ಕಾನೂನುಗಳ ಬಗ್ಗೆ ಅತ್ಯುನ್ನತ ಗೌರವ ಹೊಂದಿದ್ದು, ಭವಿಷ್ಯದಲ್ಲಿಯೂ ಸಹ ಅದನ್ನು ಮುಂದುವರಿಸುತ್ತಾರೆ’ ಎಂದು ರೈನಾ ಪರವಾಗಿ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. 

Join Whatsapp
Exit mobile version