Home ಟಾಪ್ ಸುದ್ದಿಗಳು ಉತ್ತರಾಖಂಡ್ ನಲ್ಲಿ ಹಿಮ ಪ್ರವಾಹ; 150ಕ್ಕೂ ಅಧಿಕ ಜನ ಕಣ್ಮರೆ

ಉತ್ತರಾಖಂಡ್ ನಲ್ಲಿ ಹಿಮ ಪ್ರವಾಹ; 150ಕ್ಕೂ ಅಧಿಕ ಜನ ಕಣ್ಮರೆ

ಉತ್ತರಾಖಂಡ್‍ ನ ದೌಲಿಗಂಗಾ ನದಿಯಲ್ಲಿ ಭಾರೀ ಹಿಮಪ್ರವಾಹ ಉಂಟಾಗಿ ಸುಮಾರು 150ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು ಭಾರೀ ಪ್ರಮಾಣದ ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ.
ಹಿಮಪಾತದಿಂದಾಗಿ ತಪೋವನ್ ಪ್ರದೇಶದಲ್ಲಿರುವ ರಿಷಿಗಂಗಾ ವಿದ್ಯುತ್ ಘಟಕ ಸಂಪೂರ್ಣವಾಗಿ ಕೊಚ್ಚಿಹೋಗಿದ್ದು, ಎರಡು ಸೇತುವೆಗಳು ಸಹ ಕುಸಿದುಬಿದ್ದಿವೆ. ತಪೋವನ –ರೆನಿಯಲ್ಲಿನ ವಿದ್ಯುತ್ ಘಟಕದಲ್ಲಿ ಕೆಲಸ ಮಾಡುತ್ತಿದ್ದ 150ಕ್ಕೂ ಅಧಿಕ ಕಾರ್ಮಿಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮರತದೇಹಗಳಿಗಾಗಿ ಶೋಧ ಕಾರ್ಯ ಆರಂಭಗೊಂಡಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಚಮೋಲಿ, ರುದ್ರಪ್ರಯಾಗ್, ಅಲಕಾನಂದ, ಋಷಿಕೇಶ್, ರುದ್ರಪ್ರಯಾಗ್ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಭಾರೀ ಹಿಮದಿಂದಾಗಿ ಕೂಲಿ ಕಾರ್ಮಿಕರು, ಸ್ಥಳೀಯರು ಸೇರಿದಂತೆ 150ಕ್ಕೂ ಹೆಚ್ಚು ಜನ ಕೊಚ್ಚಿ ಹೋಗಿದ್ದಾರೆ ಎಂದು ಶಂಕಿಸಲಾಗಿದೆ.
ಹಿಮಪಾತದಿಂದಾಗಿ ಮನೆಗಳು, ಕಟ್ಟಡಗಳು ಕುಸಿದು ಹೋಗಿದ್ದು, ಸದ್ಯ ಜನರು ಮನೆಯಿಂದ ಹೊರ ಬರಬಾರದೆಂದು ಉತ್ತರಾಖಂಡ್‍ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಟ್ವೀಟ್ ಮಾಡಿದ್ದಾರೆ.
ಎಸ್‍ ಡಿ ಆರ್‍ ಎಫ್ ತಂಡ ರಕ್ಷಣಾ ಕಾರ್ಯ ಆರಂಭಿಸಿದ್ದು, ನದಿಪಾತ್ರ ಹಾಗೂ ಅಕ್ಕಪಕ್ಕದ ಜನರನ್ನು ಜಿಲ್ಲಾಡಳಿತ ಸ್ಥಳಾಂತರ ಮಾಡಲಾಗಿದೆ.

Join Whatsapp
Exit mobile version