Home ಟಾಪ್ ಸುದ್ದಿಗಳು ಉಡದ ಮಾಂಸ ಮಾರಾಟದ ಹೊಟೇಲ್ ಮೇಲೆ ದಾಳಿ: ಮೂವರ ಬಂಧನ

ಉಡದ ಮಾಂಸ ಮಾರಾಟದ ಹೊಟೇಲ್ ಮೇಲೆ ದಾಳಿ: ಮೂವರ ಬಂಧನ

ಬೆಂಗಳೂರು: ವನ್ಯ ಜೀವಿಗಳನ್ನು ಬಂಧಿಸಿಟ್ಟು ಸಾಕುವುದಲ್ಲದೆ ಮಾಂಸ ಮಾರಾಟ ಮಾಡುತ್ತಿದ್ದ ಹೋಟೆಲ್ ಮಾಲೀಕ ಸೇರಿದಂತೆ ಮೂವರು ಆರೋಪಿಗಳನ್ನು ಜಾಲಹಳ್ಳಿ ಸಂಚಾರ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ
ಚೇಳೂರಿನ ಸರ್ಕಾರಿ ಕಾಲೇಜು ರಸ್ತೆಯ ಬದಿಯಲ್ಲಿ ಹೋಟೆಲ್ ಇಟ್ಟುಕೊಂಡಿದ್ದ ಇಸ್ಮಾಯಿಲ್ ,ಹಕ್ಕಿ-ಪಿಕ್ಕಿ ವ್ಯಕ್ತಿ, ಹೋಟೆಲ್ ಕೆಲಸಗಾರ ಬಾಬಾಜಾನ್ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ ಜೀವಂತ ಉಡಗಳು ಸೇರಿ ಇತರ ಪ್ರಾಣಿಗಳನ್ನು ರಕ್ಷಿಸಲಾಗಿದೆ.
ಆರೋಪಿ ಇಸ್ಮಾಯಿಲ್ ಹೋಟೆಲ್ nಲ್ಲಿ ಎಲ್ಲಿಯೂ ಸಿಗದ ಮಾಂಸದೂಟ ಸಿಗುತ್ತಿತ್ತು. ಅಲ್ಲದೆ, ಈತ ಕಾಡುಪ್ರಾಣಿ, ಪಕ್ಷಿಗಳನ್ನು ಜೀವಂತವಾಗಿ ಕಾಡಿನಿಂದ ತರಿಸಿ ಸಾಕಾಣಿಕೆ ಮಾಡುತ್ತಿದ್ದ. ಬಳಿಕ ಭಾರಿ ಬೆಲೆಗೆ ಪ್ರಾಣಿಗಳು ಮತ್ತು ಮಾಂಸವನ್ನು ಮಾರಾಟ ಮಾಡುತ್ತಿದ್ದ.
ಈ ಬಗ್ಗೆ ರಾಜ್ಯ ಅರಣ್ಯ ಸಂಚಾರ ದಳದ ಅಧಿಕಾರಿಗಳಿಗೆ ಸಾರ್ವಜನಿಕರು ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಹೋಟೆಲ್ ಮುಂದೆ ಅಧಿಕಾರಿಗಳು ಹೊಂಚು ಹಾಕಿ ಕುಳಿತಿದ್ದರು. ಇದೇ ಸಮಯಕ್ಕೆ ಹಕ್ಕಿ-ಪಿಕ್ಕಿ ಜನಾಂಗದ ವ್ಯಕ್ತಿಯೋರ್ವ ವನ್ಯ ಪ್ರಾಣಿಗಳನ್ನು ಎತ್ತಿಕೊಂಡು ಬಂದು ಮಾಲೀಕನಿಗೆ ಕೊಡುತ್ತಿದ್ದಾಗ ಸಂಚಾರ ದಳದ ಅಧಿಕಾರಿಗಳು ಹೋಟೆಲ್ ಮೇಲೆ ದಾಳಿ ನಡೆಸಿ ಬಂಧಿಸಿದ್ದಾರೆ.
ಹೋಟೆಲ್ ಪರೀಶೀಲಿಸಿ ಉಡಗಳು, ಇತರೆ ವನ್ಯ ಜೀವಿಗಳನ್ನು ರಕ್ಷಿಸಲಾಗಿದೆ. ವನ್ಯ ಜೀವಿಗಳ ಮಾರಾಟ ಮತ್ತು ಪ್ರಾಣಿ ವಧೆ ಅರಣ್ಯ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version