Home Uncategorized ಇಕ್ರಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಂಜಾನ್ ಕಿಟ್ ವಿತರಣೆ: ಯು.ಬಿ ಮುಹಮ್ಮದ್

ಇಕ್ರಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಂಜಾನ್ ಕಿಟ್ ವಿತರಣೆ: ಯು.ಬಿ ಮುಹಮ್ಮದ್

ಉಳ್ಳಾಲ: ಇಕ್ರಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅರ್ಹರಿಗೆ ರಂಝಾನ್ ಕಿಟ್ ವಿತರಣೆ ಮಾಡಲಾಯಿತು. ಪ್ರತಿವರ್ಷ ರಂಜಾನ್ ತಿಂಗಳಲ್ಲಿ ಅರ್ಹರನ್ನು  ಗುರುತಿಸಿ ಇಕ್ರಾ  ಚಾರಿಟೇಬಲ್ ಟ್ರಸ್ಟ್ ರಂಜಾನ್ ಕಿಟ್ ವಿತರಿಸುತ್ತಾ ಬರುತ್ತಿದ್ದು,  ಅದೇ ರೀತಿ ಈ ವರ್ಷವು ಕೂಡ ಅರವತ್ತು  ಅರ್ಹ ಕುಟುಂಬಗಳಿಗೆ ಕಿಟ್ ವಿತರಿಸಲಾಯಿತು ಎಂದು ಇಕ್ರಾಚಾರಿಟೆಬಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಮುಹಮ್ಮದ್ ಯು ಬಿ ತಿಳಿಸಿದ್ದಾರೆ.

ಇದಕ್ಕಾಗಿ ತನುಮನಧನಗಳಿಂದ ಸಹಕರಿಸಿದ  ಸಂಸ್ಥೆಯ ಸದಸ್ಯರಿಗೆ ಅವರು ಈ ವೇಳೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Join Whatsapp
Exit mobile version