Home ಟಾಪ್ ಸುದ್ದಿಗಳು ಇಂಡಿಗೊ ವಿಮಾನ ಸಂಸ್ಥೆಯ ಆನ್ ಲೈನ್ ಕಾರ್ಯಾಚರಣೆ ನಿಧಾನ: ಪ್ರಯಾಣಿಕರ ಪರದಾಟ

ಇಂಡಿಗೊ ವಿಮಾನ ಸಂಸ್ಥೆಯ ಆನ್ ಲೈನ್ ಕಾರ್ಯಾಚರಣೆ ನಿಧಾನ: ಪ್ರಯಾಣಿಕರ ಪರದಾಟ

ಮುಂಬೈ: ವಿಮಾನಯಾನ ಸಂಸ್ಥೆ ಇಂಡಿಗೊದ ಪ್ರಯಾಣಿಕರ ದಾಖಲೆ ನಿರ್ವಹಣೆಯ ತಂತ್ರಾಂಶ ಮಂದಗತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರಣ, ಚೆಕ್-ಇನ್, ಟಿಕೆಟ್ ಕಾಯ್ದಿರಿಸುವಿಕೆ ಪ್ರಕ್ರಿಯೆ ವಿಳಂಬವಾಗಿದೆ ಎಂದು ವರದಿಯಾಗಿದೆ.


ಮಧ್ಯಾಹ್ನ 12:30 ರ ಸುಮಾರಿಗೆ ಇಂಡಿಗೋ ಸರ್ವರ್ ಸಮಸ್ಯೆ ಎದುರಾಗಿದ್ದು, ಇದರಿಂದ ರಾಷ್ಟ್ರವ್ಯಾಪಿ ವಿಮಾನ ನಿಲ್ದಾಣಗಳಲ್ಲಿ ವಿಮಾನ ಕಾರ್ಯಾಚರಣೆಗಳು ಮತ್ತು ನೆಲದ ಸೇವೆಗಳಿಗೆ ಅಡ್ಡಿಯಾಗಿದೆ. ಸಿಸ್ಟಂ ಸ್ಥಗಿತದಿಂದಾಗಿ ಅನೇಕ ಪ್ರಯಾಣಿಕರಿಗೆ ವಿಮಾನಗಳನ್ನು ಹತ್ತಲು ಅಥವಾ ಟಿಕೆಟ್ಗಳನ್ನು ಕಾಯ್ದಿರಿಸಲು ಸಾಧ್ಯವಾಗುತ್ತಿಲ್ಲ.


“ನಾವು ಪ್ರಸ್ತುತ ನಮ್ಮ ನೆಟ್ ವರ್ಕ್ ನಾದ್ಯಂತ ತಾತ್ಕಾಲಿಕ ಸಿಸ್ಟಮ್ ಸ್ಲೋಡೌನ್ ಅನುಭವಿಸುತ್ತಿದ್ದೇವೆ, ಇದು ನಮ್ಮ ವೆಬ್ ಸೈಟ್ ಮತ್ತು ಬುಕಿಂಗ್ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಪರಿಣಾಮವಾಗಿ, ನಿಧಾನಗತಿಯ ಚೆಕ್-ಇನ್ ಗಳು ಮತ್ತು ವಿಮಾನ ನಿಲ್ದಾಣದಲ್ಲಿ ದೀರ್ಘ ಸರತಿ ಸಾಲುಗಳನ್ನು ಒಳಗೊಂಡಂತೆ ಗ್ರಾಹಕರು ಹೆಚ್ಚಿನ ಕಾಯುವ ಸಮಯವನ್ನು ಎದುರಿಸಬೇಕಾಗುತ್ತದೆ, ”ಎಂದು ಇಂಡಿಗೋ ಸಲಹೆಯಲ್ಲಿ ತಿಳಿಸಿದೆ.


ಸಾಧ್ಯವಾದಷ್ಟು ಬೇಗ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿರುವುದಾಗಿ ಇಂಡಿಗೊ ಹೇಳಿದೆ.


ಅಂತರರಾಷ್ಟ್ರೀಯ ಯಾನವನ್ನೂ ಒಳಗೊಂಡು ಇಂಡಿಗೊ ಸಂಸ್ಥೆಯ 2 ಸಾವಿರ ವಿಮಾನಗಳು ನಿತ್ಯ ಹಾರಾಟ ನಡೆಸುತ್ತವೆ.

Join Whatsapp
Exit mobile version