ಸೌದಿ ಅರೇಬಿಯಾದಲ್ಲಿ ಅನಧಿಕೃತವಾಗಿ ವಾಸಿಸುವವರಿಗೆ ನೆರವು ನೀಡುವವರಿಗೆ ಶಿಕ್ಷೆಯನ್ನು ಸೌದಿ ಸಚಿವಾಲಯವು ಬಿಗಿಗೊಳಿಸಿದೆ. ಪರವಾನಗಿ ಇಲ್ಲದೆ ದೇಶದಲ್ಲಿ ವಾಸಿಸುವವರು ಮತ್ತು ಅಕ್ರಮ ವಲಸಿಗರಿಗೆ ನೆರವು ನೀಡುವವರಿಗೆ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಅಂತಹ ವ್ಯಕ್ತಿಗಳಿಗೆ ಒಂದು ಲಕ್ಷ ರಿಯಾಲ್ ದಂಡ ಮತ್ತು ಎರಡು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದು ಆಂತರಿಕ ಸಚಿವಾಲಯ ಪದೇ ಪದೇ ಎಚ್ಚರಿಕೆಯನ್ನು ನೀಡಿದೆ. ಇದು ದೇಶದಲ್ಲಿ ಉಳಿದುಕೊಂಡಿರುವ ಅಕ್ರಮ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳುವ ಒಂದು ಭಾಗವಾಗಿದೆ.
ಇಖಾಮ ಕಾನೂನು ಉಲ್ಲಂಘಿಸುವವರಿಗೆ ಮತ್ತು ಅಕ್ರಮ ವಲಸಿಗರಿಗೆ ನೆರವು ನೀಡುವುದು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗುತ್ತದೆ. ಅಕ್ರಮ ವಲಸಿಗರು ಸೇರಿದಂತೆ ಕಾನೂನು ಉಲ್ಲಂಘಿಸುವವರ ಮಾಹಿತಿಯನ್ನು ಸಂಬಂಧಪಟ್ಟವರಿಗೆ ಒದಗಿಸಬೇಕು. ಅಂತಹವರಿಗೆ ಪ್ರಯಾಣ, ವಸತಿ, ಕೆಲಸ ಸೇರಿದಂತೆ ಯಾವುದೇ ನೆರವು ನೀಡಬಾರದೆಂದು ಆಂತರಿಕ ಸಚಿವಾಲಯದ ವಕ್ತಾರ ಲೆಫ್ಟಿನೆಂಟ್ ಕರ್ನಲ್ ತಲಾಲ್ ಅಲ್-ಶಲ್ಹೂಬ್ ಹೇಳಿದ್ದಾರೆ.