Home ಟಾಪ್ ಸುದ್ದಿಗಳು ಕೋಲಾರ ಜಿಲ್ಲೆಗೆ ಶೂನ್ಯ ಬಜೆಟ್ ; ಬಿಜೆಪಿ ಸರ್ಕಾರದ ವಿರುದ್ದ ಶಾಸಕ ಕೆ.ವೈ ನಂಜೇಗೌಡ ಕಿಡಿ

ಕೋಲಾರ ಜಿಲ್ಲೆಗೆ ಶೂನ್ಯ ಬಜೆಟ್ ; ಬಿಜೆಪಿ ಸರ್ಕಾರದ ವಿರುದ್ದ ಶಾಸಕ ಕೆ.ವೈ ನಂಜೇಗೌಡ ಕಿಡಿ

ಬೆಂಗಳೂರು : ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಕೋಲಾರ ಜಿಲ್ಲೆಗೆ ಶೂನ್ಯ ಬಜೆಟ್ ಘೋಷಣೆ ಮಾಡಿದ್ದಾರೆ ಎಂದು ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ದ ಕಾಂಗ್ರೆಸ್ ಶಾಸಕ ಕೆ. ವೈ ನಂಜೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಮಾಲೂರಿನಲ್ಲಿ ಮಾತನಾಡಿದ ಕೆ ವೈ ನಂಜೇಗೌಡ 2022 ರ ಬಜೆಟ್ ನಲ್ಲಿ ಕೋಲಾರ ಜಿಲ್ಲೆಯನ್ನು ಕಡೆಗಣಿಸಲಾಗಿದ್ದು, ಈ ಹಿಂದಿನ ಕಾಂಗ್ರೆಸ್ ಸರ್ಕಾರ ಕೆಸಿ ವ್ಯಾಲಿ ಯೋಜನೆಯ 2ನೇ ಹಂತಕ್ಕೆ 450 ಕೋಟಿ ಮಂಜೂರು ಮಾಡಿದೆ. ಈ ಬಾರಿಯ ಬಜೆಟ್ ನಲ್ಲಿ ಕೋಲಾರ ಜಿಲ್ಲೆಗೆ ಯಾವುದೇ ಪ್ರಯೋಜನಗಳಿಲ್ಲ ಎಂದು ಹೇಳಿದರು.

 ಉಸ್ತುವಾರಿ ಸಚಿವರು ಜಿಲ್ಲಾ ಸಚಿವರ ಸಭೆ ಕರೆದು ಅಭಿಪ್ರಾಯ ಪಡೆದುಕೊಳ್ಳಬೇಕಿತ್ತು. ಆದರೆ ಯಾರೂ ಕೋಲಾರ ಜಿಲ್ಲಾ ಶಾಸಕರ ಅಭಿಪ್ರಾಯ ಕೇಳಲಿಲ್ಲ ಎಂದು ಕೆ ವೈ ನಂಜೇಗೌಡ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಂಸದರ ವಿರುದ್ದ ಕಿಡಿಕಾರಿದ್ದಾರೆ.

Join Whatsapp
Exit mobile version