ಬೆಳಗಾವಿ: ಝಮೀರ್ ಅಹ್ಮದ್ ಖಾನ್ ಅವರು ಜಾತಿ ಧರ್ಮ ನೋಡದೇ ಸರ್ವಧರ್ಮೀಯರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಾರೆ ಮುಂಬರುವ ದಿನಗಳಲ್ಲಿ ಅವರೇ ಸಿಎಂ ಆಗುತ್ತಾರೆ ಎಂದು ವಿರಕ್ತಮಠದ ಪಂಚಾಕ್ಷರಿ ಸ್ವಾಮಿಗಳು ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಬೈಲಹೊಂಗಲ ಮತಕ್ಷೇತ್ರದ ಯಕ್ಕುಂಡಿ ಗ್ರಾಮದ ದೀಲಾವರ್ ದರ್ಗಾದಲ್ಲಿ ನಿನ್ನೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಕ್ಕುಂಡಿ ಗ್ರಾಮದ ದರ್ಗಾ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಂಕೇತವಾಗಿದ್ದು, ಶಂಕರ ಪಾಟೀಲ್ ಅವರಿಂದ ದರ್ಗಾ ಅಭಿವೃದ್ಧಿಯಾಗಿದೆ. ಬೆಂಗಳೂರಿನಿಂದ ದರ್ಗಾಕ್ಕೆ ಮಾಜಿ ಸಚಿವರು ಝಮೀರ್ ಅಹ್ಮದ್ಖಾದನ್ ಬಂದಿದ್ದಾರೆ. ಹಾಗಿರುವಾಗ ಇದರ ಶಕ್ತಿ ಎಷ್ಟಿದೆ ಎಂದು ಊಹಿಸಿಕೊಳ್ಳಿ ಎಂದಿದ್ದಾರೆ.
ಝಮೀರ್ ಅಹ್ಮದ್ ಖಾನ್ ಅವರು ಜಾತಿ ಧರ್ಮ ನೋಡದೇ ಸರ್ವಧರ್ಮೀಯರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಾರೆ. ಸಮಾಜಸೇವೆ ಮಾಡುತ್ತಾ ಬಂದಿದ್ದಾರೆ. ಇವರು ಮತ್ತೊಮ್ಮೆ ಮಂತ್ರಿಗಳಾಗಿ, ಮಠಕ್ಕೆ ಬರಬೇಕು. ಅಷ್ಟೇ ಅಲ್ಲದೇ ಇಂತಹ ಒಳ್ಳೆಯ ಮನಸ್ಸಿನ ಝಮೀರ್ ಅವರು, ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಗಳಾಗಬೇಕು ಎಂದು ಹೇಳಿದ್ದಾರೆ.