Home ಟಾಪ್ ಸುದ್ದಿಗಳು ಸಾವಿನ ಮನೆಯಲ್ಲಿ ಬಿಜೆಪಿಯವರಿಂದ ರಾಜಕೀಯ: ಶಾಸಕ ಝಮೀರ್ ಅಹ್ಮದ್ ಕಿಡಿ

ಸಾವಿನ ಮನೆಯಲ್ಲಿ ಬಿಜೆಪಿಯವರಿಂದ ರಾಜಕೀಯ: ಶಾಸಕ ಝಮೀರ್ ಅಹ್ಮದ್ ಕಿಡಿ

ಬೆಂಗಳೂರು: ನಾವು ಭಾರತೀಯ ಮುಸ್ಲಿಮರು. ಶಾಂತಿ ಸಹಬಾಳ್ವೆ ನಮ್ಮ ಮೊದಲ ಆದ್ಯತೆ ಎಂದು ಚಾಮರಾಜಪೇಟೆ ಶಾಸಕ ಹಾಗೂ ಮಾಜಿ ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾವು ಗೌರವದಿಂದ ಇಲ್ಲಿ ಬಾಳುತ್ತಿದ್ದೇವೆ. ಮುಂದೆಯೂ ಗೌರವಯುತವಾಗಿ ಇರುತ್ತೇವೆ. ನಾವು ಪಾಕಿಸ್ತಾನದಿಂದ ಬಂದವರಲ್ಲ, ನಾವು ಭಾರತೀಯ ಮುಸ್ಲಿಮರು ಎಂದು ಅವರು ತಿಳಿಸಿದ್ದಾರೆ.


ಸಾವಿನ ಮನೆಯಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಅದು ತಪ್ಪು, ಈ ಹಿಂದಿನಿಂದಲೂ ಚಾಮರಾಜಪೇಟೆಯಲ್ಲಿ ನಾನು ಶಾಸಕನಾಗಿರುವುದಕ್ಕಿಂತ ಮುಂಚೆ ಒಂದಲ್ಲ ಒಂದು ರೀತಿಯಲ್ಲಿ ಗಲಭೆಗಳು, ಕೋಮು ಸಂಘರ್ಷಗಳು ನಡೆಯುತ್ತಿದ್ದವು. ಆದರೆ ಈಗ ನಾನು ಶಾಸಕನಾದ ಮೇಲೆ ಒಂದೇ ಒಂದು ಗಲಭೆಗಳು ಇಲ್ಲಿ ನಡೆದಿಲ್ಲ. ಕ್ಷೇತ್ರ ಶಾಂತಿಯುತವಾಗಿರುವುದನ್ನು ಗಮನಿಸಿದ ಬಿಜೆಪಿ ಮುಖಂಡರು ಇಲ್ಲಿ ಯಾವುದಾದರೂ ಒಂದು ರೀತಿಯಲ್ಲಿ ಗಲಭೆಯನ್ನು ಸೃಷ್ಟಿಸಬೇಕೆಂಬ ಉದ್ದೇಶದಿಂದ ಚಂದ್ರುವಿನ ಕೊಲೆಯನ್ನು ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.


ಆದರೆ ಯಾವುದೇ ಕಾರಣಕ್ಕೂ ಇದನ್ನು ಮಾಡಲು ನಾವು ಬಿಡುವುದಿಲ್ಲ ಎಂದು ತಿಳಿಸಿದ ಶಾಸಕ ಖಾನ್, ಮುಂಬರುವ ದಿನಗಳಲ್ಲಿ ಚಾಮರಾಜಪೇಟೆ ಇನ್ನಷ್ಟು ಶಾಂತಿಯ ನೆಲೆವೀಡು ಆಗಲಿದೆ. ಚಂದ್ರು ಸಾವಿನ ನಂತರ ತನಿಖೆ ನಡೆಸಿದಂತಹ ನಗರ ಪೊಲೀಸ್ ಆಯುಕ್ತರು ಇದೊಂದು ಕೊಲೆ. ಒಂದು ರೋಲ್ ವಿಚಾರಕ್ಕೆ ನಡೆದಂತಹ ಕೊಲೆ ಎಂದು ಕಮಿಷನರ್ ತಿಳಿಸಿದ್ದಾರೆ. ಆದರೆ ಬಿಜೆಪಿಯವರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರ ಈ ತಂತ್ರಕ್ಕೆ ಯಾರು ಮತದಾರರು ನಮ್ಮ ಕ್ಷೇತ್ರದವರು ಮಣಿಯಬಾರದು. ಶಾಂತಿ ಸಹಬಾಳ್ವೆಯಿಂದ ನಾವು ಇರಬೇಕು ಎಂದು ಕರೆ ನೀಡಿದರು.

Join Whatsapp
Exit mobile version