Home ಟಾಪ್ ಸುದ್ದಿಗಳು ವಕ್ಫ್ ಇಲಾಖೆಯ ದರ್ಗಾ, ಮಸೀದಿಗಳಿಗೆ ಕಾಣಿಕೆ ನೀಡಲು ‘ಇ-ಹುಂಡಿ’ ಆ್ಯಪ್’ಗೆ ಝಮೀರ್ ಅಹ್ಮದ್ ಚಾಲನೆ

ವಕ್ಫ್ ಇಲಾಖೆಯ ದರ್ಗಾ, ಮಸೀದಿಗಳಿಗೆ ಕಾಣಿಕೆ ನೀಡಲು ‘ಇ-ಹುಂಡಿ’ ಆ್ಯಪ್’ಗೆ ಝಮೀರ್ ಅಹ್ಮದ್ ಚಾಲನೆ

ಬೆಂಗಳೂರು: ವಕ್ಫ್ ಇಲಾಖೆಯ ದರ್ಗಾ ಹಾಗೂ ಮಸೀದಿಗಳಲ್ಲಿ ಕಾಣಿಕೆ ಹಣ ಸಂಗ್ರಹಿಸಲು ಸರ್ಕಾರ ಈಗ ಇ ಹುಂಡಿ ಸೇವೆಯನ್ನು ಜಾರಿಗೆ ತಂದಿದ್ದು, ವಸತಿ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಝಮೀರ್ ಅಹಮದ್ ಖಾನ್ ಚಾಲನೆ ನೀಡಿದ್ದಾರೆ.


ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ನಡೆದ ಬೋರ್ಡ್ ಸಭೆ ಯಲ್ಲಿ ನೂತನ ಆಪ್ ಗೆ ಝಮೀರ್ ಅಹ್ಮದ್ ಅವರು ಚಾಲನೆ ನೀಡಿದರು.


ದರ್ಗಾ ಹಾಗೂ ಮಸೀದಿಗಳಿಗೆ ಸಮುದಾಯ ನೀಡುವ ಕಾಣಿಕೆ ಹಾಗೂ ದೇಣಿಗೆ ದುರುಪಯೋಗ ಆಗದಂತೆ ಜತೆಗೆ ನಿಗದಿತ ಉದ್ದೇಶಕ್ಕೆ ಬಳಕೆ ಆಗುವಂತೆ ನೋಡಿಕೊಳ್ಳಲು ಆಪ್ ಸಿದ್ದಪಡಿಸಲಾಗಿದೆ. ಮೊದಲಿಗೆ ಬೆಂಗಳೂರಿನ ಹಜರತ್ ತವಕ್ಕಲ್ ಮಸ್ತಾನ್ ಶಾ ದರ್ಗಾ ದಲ್ಲಿ ಈ ಹುಂಡಿ ವ್ಯವಸ್ಥೆ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ವಕ್ಫ್ ವ್ಯಾಪ್ತಿಗೆ ಬರುವ 3131 ದರ್ಗಾ, 10,398 ಮಸೀದಿಗಳಲ್ಲೂ ಜಾರಿಗೊಳಿಸಲಾಗುವುದು. ಸಮುದಾಯ ಎಲ್ಲಿಂದ ಯಾವುದೇ ಸಮಯದಲ್ಲಿ ಫೋನ್ ಪೇ, ಗೂಗಲ್ ಪೇ ಮೂಲಕ ದೇಣಿಗೆ, ಕಾಣಿಕೆ ನೀಡಬಹುದಾಗಿದೆ ಎಂದು ತಿಳಿಸಿದರು.

Join Whatsapp
Exit mobile version