ನಾಪತ್ತೆಯಾಗಿದ್ದ ಕೇರಳದ ಮೀನುಗಾರ ಪಾಕ್‌ ಜೈಲಿನಲ್ಲಿ ಮೃತ್ಯು!

Prasthutha|

ಪಾಲಕ್ಕಾಡ್(ಕೇರಳ): ಜಲಗಡಿಯನ್ನು ದಾಟಿ ಮೀನುಗಾರಿಕೆ ನಡೆಸಿದ ಆರೋಪದಲ್ಲಿ ಪಾಕಿಸ್ತಾನದ ನೌಕಾಪಡೆಯ ವಶದಲ್ಲಿದ್ದ ಕೇರಳದ ಮೀನುಗಾರರೊಬ್ಬರು ಜೈಲಿನಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಕೇರಳದ ಪಾಲಕ್ಕಾಡ್‌ ನ ಕಪ್ಪೂರ್‌ ನಿವಾಸಿ ಜುಲ್ಫಿಕರ್ (48) ಕರಾಚಿಯ ಜೈಲಿನಲ್ಲಿ ವಿಧಿವಶರಾಗಿರುವ ಮೀನುಗಾರ. ಅಮೃತಸರದಲ್ಲಿ ಜುಲ್ಫಿಕರ್‌ ಮೃತದೇಹವನ್ನು ಪಡೆದ ಕುಟುಂಬ ಸದಸ್ಯರು ಕೇರಳಕ್ಕೆ ಕಳುಹಿಸದೆ ಅಲ್ಲಿಯೇ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಿದ್ದಾರೆ ಪೊಲೀಸರು ಮಾಹಿತಿ ನೀಡಿದ್ದಾರೆ.
ವಿದೇಶದಲ್ಲಿರುವ ಸಹೋದರನೊಬ್ಬ ಅಮೃತ್‌ ಸರಕ್ಕೆ ಆಗಮಿಸಿದ್ದು, ಅಟ್ಟಾರ- ಪಂಜಾಬ್‌ ಗಡೀಭಾಗದಲ್ಲಿ ಜುಲ್ಫಿಕರ್‌ ಮೃತದೇಹವನ್ನು ಜಿಲ್ಲಾಧಿಕಾರಿ ಪಡೆದುಕೊಂಡು ಕುಟುಂಬಕ್ಕೆ ಹಸ್ತಾಂತರಿಸಿದರು.

- Advertisement -

2017ರಂದು ತಮ್ಮ ಮಗ ಪ್ರಯಾಣ ಕೈಗೊಂಡಿದ್ದ, ಆದರೆ ಆತನ ಬಗ್ಗೆ ನಮಗೆ ಯಾವ ಮಾಹಿತಿಯೂ ಸಿಕ್ಕಿರಲಿಲ್ಲ. ಆದರೆ IB(ಇಂಟೆಲಿಜೆನ್ಸ್‌ ಬ್ಯುರೋ) ಸ್ಪೆಷಲ್‌ ಬ್ರ್ಯಾಂಚ್‌ ವಿವರ ಸಂಗ್ರಹಿಸಿದ ಪರಿಣಾಮ ನಮಗೆ ವಿಷಯ ತಿಳಿಯುವಂತಾಗಿತ್ತು ಎಂದು ಜುಲ್ಫಿಕರ್‌ ತಂದೆ ಅಬ್ದುಲ್‌ ಹಮೀದ್‌ ಹೇಳಿದ್ದಾರೆ.

- Advertisement -