ಅಮರಾವತಿ: ಮಾಜಿ ಮುಖ್ಯಮಂತ್ರಿ ಹಾಗೂ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರ ವಿರುದ್ಧ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದ ವೈಎಸ್ ಆರ್ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಚಂದ್ರಬಾಬು ನಾಯ್ಡು ಮರಳಿ ಅಧಿಕಾರಕ್ಕೆ ಬರಲು ಜನರನ್ನು ಭಾವನಾತ್ಮಕವಾಗಿ ಹೆದರಿಸುತ್ತಿದ್ದಾರೆ. ಆದರೆ, 2019 ರಂತೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾಯ್ಡು ಅವರಿಗೆ ಜನ ಪಾಠ ಕಲಿಸಲಿದ್ದಾರೆ ಎಂದು ಹೆಳಿದರು.
‘ನಿಜ ಹೇಳಬೇಕೆಂದರೆ ಚಂದ್ರಬಾಬು ನಾಯ್ಡು ಅವರು ನಮ್ಮ ಸರ್ಕಾರದ ಅಭಿವೃದ್ಧಿ ಕಂಡು ಸಂಪೂರ್ಣ ಹತಾಶೆಯಾಗಿದ್ದಾರೆ. ಕಪ್ಪಂ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಂತೂ ಟಿಡಿಪಿಯನ್ನು ಜನ ಧೂಳಿಪಟ ಮಾಡಿದ್ದಾರೆ. ಲೂಟಿ ಬಯಸುವ ಟಿಡಿಪಿಯನ್ನು ಆಶ್ರಯಿಸುವ ಕೆಲ ಮಾಧ್ಯಮಗಳು ಮಾತ್ರ ನಮ್ಮ ವಿರುದ್ಧ ಇಲ್ಲಸಲ್ಲದ ಅಪಪ್ರಚಾರದಲ್ಲಿ ತೊಡಗಿವೆ. ನಮ್ಮ ಸರ್ಕಾರ 2019ರ ಚುನಾವಣೆಯಲ್ಲಿ ನೀಡಿದ ಶೇ 98 ಭರವಸೆಗಳನ್ನು ಈಡೇರಿಸಿದೆ ಎಂದು ಹೇಳಿದರು.
ನಟ ಹಾಗೂ ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ವಿರುದ್ಧ ಹರಿಹಾಯ್ದ ರೆಡ್ಡಿ, ಜನಸೇನಾ ಎಂಬುದು ರೌಡಿ ಸೇನಾ ಆಗಿದೆ. ಅದರ ನಾಯಕ ರೌಡಿಸೇನೆಯ ದೊಡ್ಡ ರೌಡಿ ತರ ವರ್ತಿಸುತ್ತಿದ್ದಾರೆ ಎಂದು ಹೇಳಿದ್ದಾರೆ.