Home ಟಾಪ್ ಸುದ್ದಿಗಳು ನವಿಲು ಮಾಂಸದ ಕರಿ ಮಾಡಿ ತಿಂದ ಯೂಟ್ಯೂಬರ್‌ ಬಂಧನ

ನವಿಲು ಮಾಂಸದ ಕರಿ ಮಾಡಿ ತಿಂದ ಯೂಟ್ಯೂಬರ್‌ ಬಂಧನ

ತೆಲಂಗಾಣ: ತೆಲಂಗಾಣದ ಸಿರ್ಸಿಲ್ಲಾದ ಯೂಟ್ಯೂಬರ್‌ ಒಬ್ಬರು ‘ನವಿಲು ಕರಿ’ ತಯಾರಿಸಿ ಸೇವಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಅವರನ್ನು ಬಂಧಿಸಲಾಗಿದೆ.

ಕೋದಂ ಪ್ರಣಯ್‌ ಕುಮಾರ್‌ ಎಂಬ ಯೂಟ್ಯೂಬರ್‌ ನನ್ನು ಬಂಧಿಸಲಾಗಿದೆ.

ಅಕ್ರಮ ವನ್ಯಜೀವಿ ಸೇವನೆ ಉತ್ತೇಜನಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಲಾಗಿದೆ.

ರಾಷ್ಟ್ರೀಯ ಪಕ್ಷಿ ನವಿಲಿನ ಪದಾರ್ಥ ಮಾಡಿ ತಿಂದ ಪ್ರಣಯ್‌ ಅವರ ವಿಡಿಯೋಗೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಡಿಯೋವನ್ನು ಯೂಟ್ಯೂಬ್‌ ನಿಂದ ಅಳಿಸಲಾಗಿದೆ.

Join Whatsapp
Exit mobile version