ನವದೆಹಲಿ; ಹಿಂದಿ ಸಿನಿಮಾವೊಂದನ್ನು ನಿರ್ದೇಶಕರ ಅನುಮತಿ ಇಲ್ಲದೆ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಗೂಗಲ್ CEO ಸುಂದರ್ ಪಿಚೈ ಹಾಗೂ ಐವರು ಇತರ ಅಧಿಕಾರಿಗಳ ವಿರುದ್ಧ ಮುಂಬೈ ಪೊಲೀಸರು FIR ದಾಖಲಿಸಿದ್ದಾರೆ.
‘ಏಕ್ ಹಸೀನಾ ಥಿ ಏಕ್ ದೀವಾನಾ ಥಾ’ ಚಿತ್ರದ ಕಾಪಿರೈಟ್ ತಮ್ಮ ಬಳಿ ಇದ್ದು, ಯಾರಿಗೂ ಮಾರಾಟ ಮಾಡಲಾಗಿಲ್ಲ. ಹೀಗಿದ್ದರೂ ನಿಯಮ ಮೀರಿ ಚಿತ್ರವನ್ನು ತಮ್ಮ ಅನುಮತಿ ಇಲ್ಲದೇ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಲಾಗಿದೆ ಎಂದು ಆರೋಪಿಸಿ ನಿರ್ದೇಶಕ ಸುನೀಲ್ ದರ್ಶನ್ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಚಲನಚಿತ್ರ ನಿರ್ಮಾಪಕನಾಗಿ ನಾನು ಕೆಲವು ಹಕ್ಕುಗಳನ್ನು ಹೊಂದಿದ್ದೇನೆ. ಅವುಗಳನ್ನು ನಿರ್ದಯವಾಗಿ ಉಲ್ಲಂಘಿಸಿದಾಗ, ನಾನು ಏನು ಮಾಡಬೇಕು? ನನ್ನ ಅಸಹಾಯಕತೆಯಿಂದ ದೂರು ದಾಖಲಿಸಿದ್ದೇನೆ ಹೊರತು ಬೇರೆ ಯಾವ ಉದ್ದೇಶವೂ ಇಲ್ಲ ಎಂದು ಸುನಿಲ್ ದರ್ಶನ್ ಹೇಳಿದ್ದಾರೆ.
ಭಾರತದ ಮೂಲದ ಸುಂದರ್ ಪಿಚ್ಚೈ ಅವರು 2022ರ ಪದ್ಮ ಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.