ಕಲಬುರಗಿ: ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ತಡರಾತ್ರಿ ಉದನೂರ ರಸ್ತೆಯ ಬಸಂತ ನಗರದಲ್ಲಿ ನಡೆದಿದೆ.
ಸಂತೋಷ ಕಾಲೋನಿ ನಿವಾಸಿ ಲಕ್ಷ್ಮಿಪುತ್ರ (35) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ.
ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಸಂಬಂಧಿಕರೇ ಯುವಕನನ್ನು ಕೊಲೆಗೈದಿದ್ದಾರೆಂಬ ಶಂಕೆ ವ್ಯಕ್ತವಾಗಿದೆ.
ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.