40 ಪರ್ಸೆಂಟ್ ಕಮಿಷನ್ ವಿರುದ್ಧ ಯುವ ಕಾಂಗ್ರೆಸ್ ಅಭಿಯಾನ: ಬೆಂಗಳೂರಿನೆಲ್ಲೆಡೆ ‘Paycm’ ಭಿತ್ತಿಪತ್ರ ಪ್ರದರ್ಶನ

Prasthutha|


ಬೆಂಗಳೂರು: ಗುತ್ತಿಗೆದಾರರಿಂದ ಶೇಕಡಾ 40ರಷ್ಟು ಕಮಿಷನ್ ಪಡೆದ ಆರೋಪ ಎದುರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ಹೋರಾಟ ಮುಂದುವರಿಸಿದ್ದು, ಇದೀಗ “ಪೇಸಿಎಂ” (#Paycm )ಎಂಬ ಭಿತ್ತಿಪತ್ರಗಳ ಅಭಿಯಾನ ಹಮ್ಮಿಕೊಂಡಿದೆ.

- Advertisement -


ಬೆಂಗಳೂರು ನಗರದ ಹಲವೆಡೆ ‘ಪೇಸಿಎಂ’ ಎಂಬ ಭಿತ್ತಿಪತ್ರ ಅಳವಡಿಸಿರುವ ಯುವ ಕಾಂಗ್ರೆಸ್ ಕಾರ್ಯಕರ್ತರು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಸಿಎಂ ಬೊಮ್ಮಾಯಿ ಚಿತ್ರದ ಮೇಲ್ಭಾಗದಲ್ಲಿ ಕ್ಯೂಆರ್ ಕೋಡ್ ಹಾಕಲಾಗಿದ್ದು, ಇಲ್ಲಿ ಶೇಕಡಾ 40 ಕಮಿಷನ್ ಸ್ವೀಕರಿಸಲಾಗುತ್ತದೆ ಎಂದು ಬರೆಯಲಾಗಿದೆ. ನಗರದ ಹಲವೆಡೆ ಇಂತಹ ಭಿತ್ತಿಪತ್ರ ಅಳವಡಿಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ.

Join Whatsapp
Exit mobile version