Home ಟಾಪ್ ಸುದ್ದಿಗಳು ಕಳಪೆ ಕಾಮಗಾರಿ| ಕೇಂದ್ರ ಸಚಿವ ಗಡ್ಕರಿ ಮನೆ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ

ಕಳಪೆ ಕಾಮಗಾರಿ| ಕೇಂದ್ರ ಸಚಿವ ಗಡ್ಕರಿ ಮನೆ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ

ನಾಗ್ಪುರ್: ರಸ್ತೆ ಕಾಮಗಾರಿ ಕಳಪೆಯಾಗಿದ್ದು ಈ ಸಂಬಂಧ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕೇಂದ್ರ ರಸ್ತೆ ಹಾಗೂ ಭೂ ಹೆದ್ದಾರಿ ಸಚಿವ ಗಡ್ಕರಿ ಮನೆ ಮುಂದೆ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯ ಮೆಹ್ಕರ್ ನಿವಾಸಿ ವಿಜಯ್ ಮರೋತ್ರರಾವ್ ಪವಾರ್ ಎಂಬಾತ ಸಚಿವ ಗಡ್ಕರಿ ನಿವಾಸದೆದುರು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಆತನನ್ನು ಸರಿಯಾದ ಸಮಯದಲ್ಲಿ ತಡೆದಿದ್ದರಿಂದ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ರಾಣಾ ಪ್ರತಾಪ್ ನಗರ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯ ಮೆಹ್ಕರ್ ನಿವಾಸಿ ವಿಜಯ್ ಮರೋತ್ರರಾವ್ ಪವಾರ್ ಎಂಬಾತ ಎರಡು ದಿನಗಳ ಹಿಂದೆ ಶೇಗಾಂವ್-ಖಮಗಾಂವ್ ಪಾಲ್ಖಿ ರಸ್ತೆಯ ಕಳಪೆ ಕಾಮಗಾರಿ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿ ಸಚಿವರಿಗೆ ಪತ್ರ ಬರೆದಿದ್ದ. ಬೇಡಿಕೆ ಈಡೇರಿಸದಿದ್ದರೆ ಗಡ್ಕರಿ ನಿವಾಸದೆದುರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ತಿಳಿಸಿದ್ದನು.

ಈ ಹಿನ್ನೆಲೆ ಗಡ್ಕರಿ ಮನೆ ಮುಂದೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿತ್ತು.ಆದರೆ, ನಿನ್ನೆ ಸಂಜೆ ಸಚಿವರ ಮನೆ ಮುಂದೆ ಆಗಮಿಸಿದ್ದ ಆತ ಕೀಟನಾಶಕ ಸೇವಿಸಿದ್ದಾನೆ. ಈ ವೇಳೆ ಪೊಲೀಸ್ ಸಿಬ್ಬಂದಿ ಆತನನ್ನು ತಡೆದು ಅಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆತನ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Join Whatsapp
Exit mobile version