Home ಟಾಪ್ ಸುದ್ದಿಗಳು PFI ಹೆಸರಿನಲ್ಲಿ ಬೆದರಿಕೆ ಆರೋಪ: ಯುವಕನ ಬಂಧನ

PFI ಹೆಸರಿನಲ್ಲಿ ಬೆದರಿಕೆ ಆರೋಪ: ಯುವಕನ ಬಂಧನ

ಶಿವಮೊಗ್ಗ: ವ್ಯಕ್ತಿಯೋರ್ವನಿಗೆ ಸಾಮಾಜಿಕ ಜಾಲತಾಣದಲ್ಲಿ PFI ಸಂಘಟನೆ ಹೆಸರಿನಲ್ಲಿ ಬೆದರಿಕೆ ಹಾಕಿದ ಆರೋಪದಲ್ಲಿ ಯವಕನನ್ನು ಪೊಲೀಸರು ಬಂಧಿಸಿದ್ದಾರೆ.


ಸಾಗರ ತಾಲೂಕಿನ ಜಾವೇದ್ ಅಹ್ಮದ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.


‘Only PFI’ ಎಂಬ ಇನ್ ಸ್ಟಾಗ್ರಾಮ್ ಖಾತೆಯ ಮೂಲಕ ಕೆಂಚನಾಲ ಗ್ರಾಮದ ಸುಮಂತ್ ಎಂಬವರಿಗೆ ಕಳೆದ ತಿಂಗಳು ಬೆದರಿಕೆ ಹಾಕಲಾಗಿದೆ ಎಂದು ಸುಮಂತ್ ರಿಪ್ಪನ್ ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಹಿನ್ನೆಲೆಯಲ್ಲಿ ಜಾವೇದ್ ಅಹ್ಮದ್ ನನ್ನು ರಿಪ್ಪನ್ ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

Join Whatsapp
Exit mobile version