Home ಟಾಪ್ ಸುದ್ದಿಗಳು ಡ್ರಗ್ಸ್ ಸೇವಿಸಿ ನಡು ರಸ್ತೆಯಲ್ಲಿ ತೂರಾಡಿದ ಯುವತಿ

ಡ್ರಗ್ಸ್ ಸೇವಿಸಿ ನಡು ರಸ್ತೆಯಲ್ಲಿ ತೂರಾಡಿದ ಯುವತಿ

ಚಂಡೀಗಢ: ಯುವತಿಯೊಬ್ಬಳು ಡ್ರಗ್ಸ್ ಸೇವಿಸಿ ನಡೆಯಲಾಗದೆ ನಡು ರಸ್ತೆಯಲ್ಲಿ ತೂರಾಡುವ ವೀಡಿಯೋ ವೈರಲ್ ಆಗಿದ್ದು, ಮಹಿಳೆಯನ್ನು ವೈರಲ್ ವಿಡಿಯೋ ಬಳಿಕ‌ ಪತ್ತೆ ಹಚ್ಚಿ ವ್ಯಸನಮುಕ್ತ ಕೇಂದ್ರಕ್ಕೆ ದಾಖಲಿಸಲಾದ ಘಟನೆ ಪಂಜಾಬ್‌ನ ಅಮೃತಸರದಲ್ಲಿ ನಡೆದಿದೆ.


ಅಮೃತಸರ ಪೂರ್ವ ಕ್ಷೇತ್ರದ ಮಕ್ಬೂಲ್‌ಪುರ ಪ್ರದೇಶದಲ್ಲಿ ಸೆರೆಹಿಡಿಯಲಾದ ವಿಡಿಯೋದಲ್ಲಿ ಡ್ರಗ್ಸ್ ಸೇವಿಸಿ ರಸ್ತೆಯಲ್ಲಿ ನಿಂತ ಯುವತಿಯೊಬ್ಬಳು ಚಲಿಸಲು ಹೆಣಗಾಡುತ್ತಿದ್ದಳು. ವೀಡಿಯೋ ವೈರಲ್ ಆದ ನಂತರ, ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಮಕ್ಬೂಲ್‌ಪುರ ಪೊಲೀಸರು ಮೂವರನ್ನು ಬಂಧಿಸಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡರು.


ಸಿಖ್ಖರ ಪವಿತ್ರ ನಗರದಲ್ಲಿರುವ ಮಕ್ಬೂಲ್ ಪುರವು ಮಾದಕ ದ್ರವ್ಯ ಸೇವನೆಗೆ ಸಂಬಂಧಿಸಿದ ಘಟನೆಗಳಿಗೆ ಆಗಾಗ್ಗೆ ಸುದ್ದಿಯಾಗುತ್ತಿದೆ. ಯುವತಿಯ ವಿರುದ್ಧ ಪೊಲೀಸರು ಪ್ರತ್ಯೇಕ ಎಫ್ಐ ಆರ್ ದಾಖಲಿಸಿದ್ದಾರೆ.

Join Whatsapp
Exit mobile version