Home ಟಾಪ್ ಸುದ್ದಿಗಳು ಆತ್ಮಗಳ ಜತೆಯಲ್ಲಿ ಮಾತನಾಡುತ್ತೇನೆಂದು ನಾಪತ್ತೆಯಾಗಿದ್ದ ಬಾಲಕಿ ಸೂರತ್ ನಲ್ಲಿ ಪತ್ತೆ

ಆತ್ಮಗಳ ಜತೆಯಲ್ಲಿ ಮಾತನಾಡುತ್ತೇನೆಂದು ನಾಪತ್ತೆಯಾಗಿದ್ದ ಬಾಲಕಿ ಸೂರತ್ ನಲ್ಲಿ ಪತ್ತೆ

ಬೆಂಗಳೂರು: ಶಮನಿಸಂ ಆಚರಣೆಯೆಡೆಗೆ ಆಕರ್ಷಿತಳಾಗಿ ಆತ್ಮಗಳ ಜತೆಯಲ್ಲಿ ಮಾತನಾಡುತ್ತೇನೆ ಎಂದು ಮನೆಬಿಟ್ಟು ತೆರಳಿದ್ದ ಬಾಲಕಿ ಬರೋಬ್ಬರಿ 78 ದಿನಗಳ ಬಳಿಕ ಗುಜರಾತ್ ನಲ್ಲಿ ಪತ್ತೆಯಾಗಿದ್ದಾಳೆ.

ಶಮನಿಸಂ ಆಚರಣೆಯೆಡೆಗೆ ಆಕರ್ಷಿತಳಾಗಿದ್ದ ಬಾಲಕಿ ಕಳೆದ ಅ. 31ರಂದು ಮನೆಬಿಟ್ಟು ನಾಪತ್ತೆಯಾಗಿದ್ದಳು. ಬರೋಬ್ಬರಿ 78 ದಿನಗಳ ಬಳಿಕ ಗುಜರಾತ್ನ ಸೂರತ್ನಲ್ಲಿ ಬಾಲಕಿ ಪತ್ತೆಯಾಗಿದ್ದಾಳೆ. ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಅಪ್ರಾಪ್ತೆಯು ಗುಜರಾತ್ ನ ಸೂರತ್ ನ ಅನಾಥಾಶ್ರಮವೊಂದರಲ್ಲಿ ಪತ್ತೆಯಾಗಿದ್ದಾಳೆ. ಬಾಲಕಿಯನ್ನು ಪತ್ತೆಹಚ್ಚಿ ನಗರಕ್ಕೆ ಕರೆತಂದಿರುವ ಸುಬ್ರಹ್ಮಣ್ಯನಗರ ಪೊಲೀಸರು ಆಕೆಯನ್ನು ಪೋಷಕರಿಗೆ ಒಪ್ಪಿಸಿದ್ದಾರೆ.

17 ವರ್ಷದ ಬಾಲಕಿ ಆತ್ಮಗಳ ಜೊತೆ ಮಾತಾಡುವುದನ್ನು ಅಭ್ಯಾಸ ಮಾಡುತ್ತೇನೆಂದು ಅಕ್ಟೋಬರ್ 31ರಂದು ಮನೆಬಿಟ್ಟು ತೆರಳಿದ್ದಳು. ಈ ವೇಳೆ 2 ಜೊತೆ ಬಟ್ಟೆ ಹಾಗೂ 2500 ರೂ. ನಗದು ತೆಗೆದುಕೊಂಡು ಹೋಗಿದ್ದಳು.

ಈ ಸಂಬಂಧ ಸುಬ್ರಹ್ಮಣ್ಯನಗರ ಪೊಲೀಸ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಪೋಷಕರು ಕೂಡ ಸಾಮಾಜಿಕ ಜಾಲತಾಣದಲ್ಲಿ ಮಗಳ ಪತ್ತೆಗೆ ಸಹಕರಿಸುವಂತೆ ಮನವಿಮಾಡಿದ್ದರು.

Join Whatsapp
Exit mobile version