Home ಟಾಪ್ ಸುದ್ದಿಗಳು ಹಣಕಾಸಿನ ವಿಚಾರ: ಚಾಕುವಿನಿಂದ ಇರಿದು ಯುವಕನ ಕೊಲೆ

ಹಣಕಾಸಿನ ವಿಚಾರ: ಚಾಕುವಿನಿಂದ ಇರಿದು ಯುವಕನ ಕೊಲೆ

ಚಿಕ್ಕಮಗಳೂರು:  ಹಣಕಾಸಿನ ವಿಚಾರಕ್ಕೆ ಯುವಕರ ನಡುವೆ ಜಗಳ ನಡೆದು ಆ ಬಳಿಕ ಕೊಲೆಯಲ್ಲಿ ಅಂತ್ಯವಾದ ಘಟನೆ ಚಿಕ್ಕಮಗಳೂರು ನಗರದ ಕೋಟೆ ಬಡಾವಣೆಯಲ್ಲಿ ಸೋಮವಾರ ನಡೆದಿದೆ.

ದ್ರುವರಾಜ್ ಅರಸ್ (26) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ.

ದ್ರುವ ರಾಜ್ ಹಾಗೂ ಪ್ರಮೋದ್ ಇಬ್ಬರ ನಡುವೆ ಹಣಕಾಸಿನ ವಿಚಾರಕ್ಕೆ ಜಗಳವುಂಟಾಗಿದ್ದು, ದ್ರುವ ರಾಜ್‍ ಗೆ, ಪ್ರಮೋದ್ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Join Whatsapp
Exit mobile version