Home ಟಾಪ್ ಸುದ್ದಿಗಳು ವಿದೇಶಕ್ಕೆ ತೆರಳಿದ ಮರುದಿನವೇ ಯುವಕ ಹೃದಯಾಘಾತದಿಂದ ಮೃತ್ಯು

ವಿದೇಶಕ್ಕೆ ತೆರಳಿದ ಮರುದಿನವೇ ಯುವಕ ಹೃದಯಾಘಾತದಿಂದ ಮೃತ್ಯು


ಕೋಝಿಕ್ಕೋಡ್: ಒಂದು ತಿಂಗಳ ರಜೆ ಕಳೆದು ಮತ್ತೆ ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳಿದ ಮರುದಿ‌ನವೇ ಯುವಕನೊಬ್ಬ ಹೃದಯಾಘಾತದಿಂದ ಮೃತಪಟ್ಟ ಹೃದಯ ವಿದ್ರಾವಕ ಘಟನೆಯೊಂದು ವರದಿಯಾಗಿದೆ.


ಮಯ್ಯನ್ನೂರು ಚೆರಿಯಪರಂಬ ನಿವಾಸಿ ಝಾಕೀರ್ (33)ಮೃತ ಯುವಕ. ದುಬೈನಲ್ಲಿ ಕೆಲ ವರ್ಷಗಳಿಂದ ಲಿಪ್ಟ್ ಆಪರೇಟರ್ ಆಗಿ ಕೆಲಸ‌ ಮಾಡುತ್ತಿದ್ದ ಝಾಕೀರ್ ನಿಧನಕ್ಕೆ ಹೃದಯಾಘಾತ ಕಾರಣ ಎನ್ನುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ.

ಝಾಕಿರ್ ರವರು ಊರಿನಿಂದ ಮರಳುವ ಸಂದರ್ಭದಲ್ಲಿ ಕೊನೆಯ ಬಾರಿಗೆ ತನ್ನ ತಾಯಿಯ ಕೈಯಿಂದ ಊಟದ ತುತ್ತು ತೆಗೆದುಕೊಳ್ಳುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

Join Whatsapp
Exit mobile version