ಜಲಪಾತದ ಬಳಿ ಸೆಲ್ಫಿ: ಜಾರಿ ಬಿದ್ದ ಯುವಕ ಸಾವು

Prasthutha|

ಬೆಂಗಳೂರು: ಕನಕಪುರ ತಾಲೂಕಿನ ಚುಂಚಿಫಾಲ್ಸ್ ಬಳಿ ಯುವಕ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಶಂಕರಮಠದ ಪ್ರವೀಣ್ ಚಂದ್ರ (26) ಮೃತ ಯುವಕ ಎಂದು ಗುರುತಿಸಲಾಗಿದೆ. ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಪ್ರವೀಣ್ ಚಂದ್ರ ನಿನ್ನೆ ತನ್ನ ಇಬ್ಬರು ಸ್ನೇಹಿತರ ಜೊತೆ ಚುಂಚಿಫಾಲ್ಸ್ ಗೆ ಬಂದಿದ್ದಾನೆ.
ಈ ವೇಳೆ ಅಪಾಯದ ಸ್ಥಳದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಕಾಲು ಚಾರಿ ಬಿದ್ದು ಸಾವನ್ನಪ್ಪಿದ್ದಾನೆ. ಇಂದು ಚುಂಚಿಪಾಲ್ಸ್ ನಿಂದ ಒಂದು ಕಿಲೋಮೀಟರ್ ದೂರದಲ್ಲಿದೆ ಮೃತ ದೇಹ ಪತ್ತೆಯಾಗಿದೆ. ಸಾತನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Join Whatsapp