ರೀಲ್ಸ್ ಗಾಗಿ ಹಾವನ್ನು ಬಾಯಿಯಲ್ಲಿ ಕಚ್ಚಿ ಹಿಡಿದ ಯುವಕ ಮೃತ್ಯು

Prasthutha|

ತೆಲಂಗಾಣ: ರೀಲ್ಸ್ ಗಾಗಿ ಹಾವನ್ನು ಬಾಯಿಯಲ್ಲಿ ಕಚ್ಚಿ ಹಿಡಿದ ಯುವಕನೋರ್ವ ಮೃತಪಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

- Advertisement -

ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಬನ್ಸವಾಡ ಮಂಡಲದ ದೇಸಾಯಿಪೇಟ್ ಗ್ರಾಮದ ಹಾವಾಡಿಗನೊಬ್ಬನ ಮಗ ಶಿವ ಎಂಬಾತ ಗ್ರಾಮದ ಕಾಲೋನಿಗೆ ಪ್ರವೇಶಿಸಿದ 6 ಅಡಿಯ ನಾಗರ ಹಾವನ್ನು ಹಿಡಿದು ಗ್ರಾಮದಿಂದ ಹೊರಗೆ ಬಿಡಲು ತೆಗೆದುಕೊಂಡು ಹೋಗುವ ವೇಳೆ ಹುಚ್ಚು ಸಾಹಸವನ್ನು ಮಾಡಿದ್ದಾನೆ.

ಹಾವನ್ನು ಹಿಡಿದುಕೊಂಡು ಅದನ್ನು ಬಾಯಿಯಲ್ಲಿ ಕಚ್ಚಿ ಹಿಡಿದಿದ್ದಾನೆ. ಇದನ್ನು ಅಲ್ಲಿದ್ದವರು ಅಚ್ಚರಿಗೊಂಡು ವಿಡಿಯೋ ಹಾಗೂ ಫೋಟೋ ತೆಗೆದಿದ್ದಾರೆ. ಆದರೆ ಬಾಯಿಯೊಳಗೆ ಹೋದ ಹಾವು ಶಿವನಿಗೆ ಕಚ್ಚಿದ್ದು, ಇದು ಶಿವನ ಗಮನಕ್ಕೆ ಬಂದಿರುವುದಿಲ್ಲ.
ಮಧ್ಯಾಹ್ನದ ವೇಳೆ ಇದ್ದಕ್ಕಿದ್ದಂತೆ ಶಿವ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಕೂಡಲೇ ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಆತ ಆದಾಗಲೇ ಹಾವು ಕಡಿತದಿಂದ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.
ವಿಷಕಾರಿ ಹಾವು ಕಡಿತಕ್ಕೂ ಮುನ್ನ ಶಿವ ಹಾವನ್ನು ಹಿಡಿದುಕೊಂಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.



Join Whatsapp
Exit mobile version